ಗ್ರಾಪಂ ಉಪಾಧ್ಯಕ್ಷೆಯಾಗಿ ಸುಚಿತ್ರಾ ಅವಿರೋಧ ಆಯ್ಕೆ

ಪಾಂಡವಪುರ, ಗ್ರಾಪಂ ಉಪಾಧ್ಯಕ್ಷೆಯಾಗಿ ಸುಚಿತ್ರಾ ಅವಿರೋಧ ಆಯ್ಕೆ,
23-pnp 1
Published on

ಪಾಂಡವಪುರ: ತಾಲೂಕಿನ ಕೆ.ಬೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ರೈತಸಂಘ ಬೆಂಬಲಿತ ಅಭ್ಯರ್ಥಿ ಸುಚಿತ್ರಾ ಬಾಲರಾಜು ಅವಿರೋಧ ಆಯ್ಕೆಯಾದರು.


ಮಂಜುಳಾ ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಯಾರೊಬ್ಬರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಾಗೂ ತಾಪಂ ಇಒ ಲೋಕೇಶ್‌ಮೂರ್ತಿ ಅವಿರೋಧ ಆಯ್ಕೆ ಘೋಷಿಸಿದರು.


ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ರೈತಸಂಘ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು. ಗ್ರಾಪಂ ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಮಾಕೇಗೌಡ, ಮಾಜಿ ಉಪಾಧ್ಯಕ್ಷೆ ಮಂಡಿಬೆಟ್ಟಹಳ್ಳಿ ಮಂಜುಳಾ ಜಗದೀಶ್, ಸದಸ್ಯರಾದ ಆನಂದ, ಡಾ.ಮಡಹಳ್ಳಿ ಅಶೋಕ, ಕೆಂಪರಾಜು, ಪ್ರಭುಸ್ವಾಮಿ, ಸ್ವಾಮೀಗೌಡ, ಶಂಕರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net