

ಕೊಪ್ಪಳ :ತಾಲೂಕಿನ ಅಗಳಕೇರಾ ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಮಂಗಳವಾರ ಚುನಾವಣೆ ನಡೆಸಲಾಯಿತು.
ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಿದ್ದ ಕಾರಣ ಸಮುದಾಯದ ಏಕೈಕ ಸದಸ್ಯೆ ಇದ್ದ ಕಾರಣ ಯಂಕವ್ವ ಕನಕರಾಜಜ ಬುಳ್ಳಾಪುರ ಅಧ್ಯಕ್ಷೆಯಾಗಿ ಹಾಗೂ ಉಪಾಧ್ಯಕ್ಷೆಯಾಗಿ ಪ್ರಭಾವತಿ ಬಂಬಣ್ಣ ಹೂಗಾರ ಅವಿರೋಧ ಆಯ್ಕೆಯಾದರು. ಚುನಾವಣಾ ನೋಡಲ್ ಅಧಿಕಾರಿ ಶರಣು ಪೂಜಾರಿ ಚುನಾವಣೆ ಪ್ರಕ್ರಿಯೆ ನಡೆಸಿ ಅವಿರೋಧ ಆಯ್ಕೆ ಘೋಷಿಸಿದರು. ಗ್ರಾಪಂ ಪಿಡಿಒ ಅನಿತಾ ಇತರರಿದ್ದರು.