

ಕಲಬುರಗಿ: ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮ ಪಂಚಾಯಿತಿಗೆ ಗ್ರಾಮದ ಎಲ್ಲ ಮುಖಂಡರು, ಎಲ್ಲ ಸದಸ್ಯರ ಬೆಂಬಲದಿAದ ಜೂ.೨೭ರಂದು ನಡೆಯಲಿರುವ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸದಿರುವಂತೆ ಗ್ರಾಮದ ಕೆಲವರು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಹಂಗಾಮಿ ಅಧ್ಯಕ್ಷೆ ಸಪ್ನಾ ಕಡಿ ಆರೋಪಿಸಿದರು.
ಗ್ರಾಮದ ಶರಣಗೌಡ ಹಿರೇಗೌಡ, ಶಿವಣಗೌಡ ಪೊ.ಪಾಟೀಲ್, ದೇವಪ್ಪ ಪೂಜಾರಿ ಅವರು ಕೆಲವರ ಗುಂಪುಕಟ್ಟಿಕೊAಡು ಮನೆ ಬಳಿ ಬಂದು ಜಾತಿ ನಿಂದನೆ ಮಾಡಿ, ಅವಾಚ್ಯವಾಗಿ ಬೈದಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದರೆ ಜೀವ ಸಹಿತ ಬೀಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಸ್ವೀಕರಿಸಿಲ್ಲ. ಆದ್ದರಿಂದ ಎಸ್‌ಪಿ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿz್ದÉÃವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡಪರ ಹೋರಾಟಗಾರ ಮಂಜುನಾಥ ನಾಲವಾರಕರ್ ಮಾತನಾಡಿ, ಅರಳಗುಂಡಗಿ ಗ್ರಾಪಂ ಅಧ್ಯಕ್ಷ ಚುನಾವಣೆ ವೇಳೆ ಕೆಲವರು ಚುನಾವಣೆಗೆ ಅಡ್ಡಿಪಡಿಸುವ ಕೆಲಸ ಮಾಡುತ್ತಿದ್ದು, ಅವರನ್ನು ಚುನಾವಣೆ ಬರೆಗೆ ಗ್ರಾಮದಿಂದ ದೂರ ಇಡಬೇಕು. ಪ್ರಕ್ರಿಯೆ ಸರಳ ಆಗುವಂತೆ ಕ್ರಮ ಕೈಗೊಳ್ಳಬೇಕು. ಸಪ್ನಾ ಕಡಿ ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಆಗ್ರಹಿ