ಗ್ರಾಪಂ ಅಧ್ಯಕ್ಷ - ಉಪಾಧ್ಯಕ್ಷ ಮೀಸಲಾತಿ ಆಯ್ಕೆಗೆ ಮುಹೂರ್ತ ಫಿಕ್ಸ್

IMG-20210109-WA0049
Published on

ವಿಜಯಪುರ: ತೀವ್ರ ಕುತೂಹಲ ಕೆರಳಿಸಿರುವ ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟಣೆಗೆ ಜಿಲ್ಲಾಡಳಿತ ದಿನಾಂಕ ನಿಗದಿಪಡಿಸಿದೆ.

ಜಿಲ್ಲೆಯ 12 ತಾಲೂಕುಗಳ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ತೆಗೆಯಲಾಗುವುದೆಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.

ಜ. 16 ರಂದು ಬೆಳಗ್ಗೆ 11 ಕ್ಕೆ

ಕೊಲ್ಹಾರದ ಶಾದಿ ಮಹಲ್, ಮಧ್ಯಾಹ್ನ 3 ಕ್ಕೆ‌ ನಿಡಗುಂದಿ ಮಹೇಶ್ವರಿ ಕಲ್ಯಾಣ ಮಂಟಪ, ಜ.17 ರಂದು ಬೆಳಗ್ಗೆ 11ಕ್ಕೆ

ತಿಕೋಟಾದ ಹಾಜಿ ಮಸ್ತಾನ್ ಕಲ್ಯಾಣ ಮಂಟಪ, ಮಧ್ಯಾಹ್ನ 3 ಕ್ಕೆ ಬಬಲೇಶ್ವರ ದ ಹರಳಯ್ಯನ ಗುಂಡ ಸಮುದಾಯ ಭವನ, ಜ.18 ರಂದು ಬೆಳಗ್ಗೆ 11 ಕ್ಕೆ ವಿಜಯಪುರದ ಕಂದಗಲ್ಲ ಹನುಮಂತ ರಾಯ ರಂಗಮಂದಿರ, ಮಧ್ಯಾಹ್ನ 3 ಕ್ಕೆ ಬ.ಬಾಗೇವಾಡಿ ಯ ಶ್ರೀ ಜಗದ್ಗುರು ಪಂಚಾಕ್ಷರಿ ಜನ ಕಲ್ಯಾಣ ಭವನ, ಜ. 22 ಕ್ಕೆ ಬೆಳಗ್ಗೆ 11 ಕ್ಕೆ ಮುದ್ದೇಬಿಹಾಳ ದ ವಿಜಯಮಹಾಂತೇಶ ಕಲ್ಯಾಣ ಭವನ, ಮಧ್ಯಾಹ್ನ 3 ಕ್ಕೆ ತಾಳಿಕೋಟೆಯ ಸಂಗಮೇಶ್ವರ ಕಲ್ಯಾಣ ಮಂಟಪ, ಜ.23 ಕ್ಕೆ ಬೆಳಗ್ಗೆ 11 ಕ್ಕೆ ಇಂಡಿ ಶಾಂತೇಶ್ವರ ಮಂಗಲ ಕಾರ್ಯಾಲಯ, ಮಧ್ಯಾಹ್ನ 3 ಕ್ಕೆ‌ ಚಡಚಣದ ಗುರು ಕೃಪಾ ಭವನ, ಜ.24 ರಂದು ಬೆಳಗ್ಗೆ 11 ಕ್ಕೆ ಸಿಂದಗಿಯ ಡಾ.ಭಾವಿಕಟ್ಟಿ ಕಲ್ಯಾಣ ಮಂಟಪ, ಮಧ್ಯಾಹ್ನ 3 ಕ್ಕೆ ದೇ.ಹಿಪ್ಪರಗಿ ಯ ಶ್ರೀ ಶ್ರೀ ಜಗದ್ಗುರು ಪಂಚಾಚಾರ್ಯ

ಕಲ್ಯಾಣ ಮಂಟಪದಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net