ಗ್ರಾಂಡ್‌ಫಿನಾಲೆಗೆ ವಿದ್ಯಾರ್ಥಿಗಳು

grand
Published on

ಚಿತ್ರದುರ್ಗ: ಬೆಂಗಳೂರಿನ ಕರ್ನಾಟಕ ಸಮಗ್ರ ಶಿಕ್ಷಣ ಮತ್ತು Yuwaah ಸಂಸ್ಥೆಯಿಂದ School innovation Program ಅಡಿಯಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ‘ಪ್ರೋಟೊಟೈಪಿಂಗ್ ಕ್ಯಾಂಪ್’ಮತ್ತು‘ಟಾಪ್ ಐಡಿಯಾ ನೀಡಿ’ಗ್ರಾಂಡ್‌ಫಿನಾಲೆಗೆ ಜಿಲ್ಲೆಯಿಂದ 9 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ನಗರದ ಬಾಲಕರ ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿದ್ಯಾರ್ಥಿಗಳಾದ ಪ್ರಸನ್ನಕುಮಾರ್, ಗಿರೀಶ್, ಶಿವಕೃಷ್ಣ, ಭಾಸ್ಕರ್‌ಶಾಸ್ತ್ರಿ ಹಾಗೂ ಹೊಸದುರ್ಗ ತಾಲೂಕು ಮಲ್ಲಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರೀತಮ್, ಸಂದೀಪ್,ದೀಪಿಕಾ, ದಿವ್ಯಾಶ್ರೀ, ಜೀವನ್ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಜು.22ರಿಂದ 24ರವರೆಗೆ ನಡೆಯುವ ಗ್ರಾಂಡ್‌ಫಿನಾಲೆಯಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಡಯಟ್ ನೋಡಲ್ ಅಧಿಕಾರಿ ಯು.ಸಿದ್ದೇಶಿ ತಿಳಿಸಿದ್ದಾರೆ.

ಶಿಕ್ಷಕರಾದ ಜಿ.ಟಿ.ನಾಗವೇಣಿ, ರವಿಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿಗಳು, ಮ್ಯಾಗ್ನಟಿಕ್ ಪ್ಯೂಯೆಲ್ ಸೆನ್ಸಾರ್ ಹಾಗೂ ಮಲ್ಲಪ್ಪನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ಎಚ್.ಎಸ್.ವಾಸುದೇವ ಅವರ ಮಾರ್ಗದರ್ಶನದಲ್ಲಿ Inte grated smart shoe for a blind person ಐಡಿಯಾವನ್ನು ಸಿದ್ಧಪಡಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net