ಚಿಕ್ಕೋಡಿ: ಹಿರೇಕೊಡಿ ಗ್ರಾಮ ಪಂಚಾಯತನಲ್ಲಿ ಯಾವುದೇ ರೀತಿಯಾದ ಭ್ರಷ್ಟಾಚಾರ ನಡೆದಿಲ್ಲ,ದಲಿತ ಮಹಿಳೆ ಅಧ್ಯಕ್ಷ್ಯೆ ಆಗಿರುವುದಕ್ಕೆ ಕೆಲ ಸದಸ್ಯರು ಸಹಿಸಿಕೊಳ್ಳಲಾರದೆ ಈ ರೀತಿಯಾದ ಆರೋಪ ಮಾಡುತ್ತಿದ್ದಾರೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ್ಯೆ ನಿಲಮ ದಾಮ್ಮನವರ ಹೇಳಿದ್ದಾರೆ.
ಹಿರೇಕೊಡಿ ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಅವರ ಆರೋಪಕ್ಕೆ ಸಂಬಂಧಿಸಿದಂತೆ ಸಭೆಯನ್ನು ಆಯೋಜನೆ ಮಾಡಲಾಗಿತ್ತು.ಆದ್ರೆ ಅವರೆ ಈ ಸಭೆಯನ್ನು ರದ್ದು ಮಾಡಿದ್ದಾರೆ. ಗ್ರಾ.ಪಂನ ಹೊಸ ಕಟ್ಟಡ ಆಗುತ್ತಿದೆ.ಆ ಕಟ್ಟಡ ಕಾಮಗಾರಿಯನ್ನು ಅವರೇ ಸ್ಥಗೀತಗೊಳಿಸಿದ್ದಾರೆ.ನಾನು ದಲಿತ ಅಧ್ಯಕ್ಷ್ಯೆಯಾಗಿದೇನೆ.ನನ್ನಗೆ ಶ್ರೇಯಸ್ಸು ಬರಬಾರದೆಂದು ಈ ರೀತಿಯಾದ ಆರೋಪವನ್ನು ಮಾಡುತ್ತಿದ್ದಾರೆ ಎಂದರು.