

ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಸುಂಟಿಕೊಪ್ಪ ಮೋಟಾರ್ ವಾಹನ ವರ್ಕ್‌ಶಾಪ್ ಸಂಘದ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.
ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಆರ್.ಸುನಿಲ್, 25 ವರ್ಷಗಳ ಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮೊದಲ ಪ್ರೇರಣೆಯಾಗಿದ್ದು ವರ್ಕ್‌ಶಾಪ್ ಮಾಲೀಕರ ಸಂಘ. ಬಿಜೆಪಿಯಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದ ನನಗೆ ಊರಿನ ಅಧ್ಯಕ್ಷ ಪದವಿ ದೊರೆಯಲು ಈ ಸಂಘವೇ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಸಂಘದ ಗೌರವಧ್ಯಕ್ಷರಾದ ವಿ.ಎ.ಸಂತೋಷ್, ವಿನೋದ್, ಪಿ.ಆರ್.ಸುಕುಮಾರ್, ಸಂಘದ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಸಹಕಾರ್ಯದರ್ಶಿ ಜಿಬಿನ್, ಎಸ್.ರಮೇಶ್, ತಂಗವೇಲು, ಜೇಸುದಾಸ್, ಪಿಲಿಪ್, ಸುರೇಶ್, ಹೂವೇಗೌಡ, ಕಿರಣ್, ಸತೀಶ ಇತರರು ಇದ್ದರು.