ಗ್ರಹಗಳನ್ನೂ ನೋಡುವ ಅವಕಾಶ

CTD GRAHA-------
Published on

ಚಿತ್ರದುರ್ಗ: ರಾತ್ರಿ ಆಕಾಶದಲ್ಲಿ ಏಕಕಾಲದಲ್ಲಿ ಬಹುತೇಕ ಎಲ್ಲ ಗ್ರಹಗಳನ್ನು ಬರಿಗಣ್ಣಿನಲ್ಲೇ ನೋಡುವಂಥ ಅವಕಾಶ ಮಂಗಳವಾರದಿಂದ ಹವ್ಯಾಸಿ ಖಗೋಳ ವೀಕ್ಷಕರಿಗೆ ದೊರೆತಿದ್ದು,ಈ ಸದಾವಕಾಶವೂ ಫೆಬ್ರವರಿ 2ರವರೆಗೆ ಇರಲಿದೆ ಎಂದು ಹವ್ಯಾಸಿ ಖಗೋಳ ವೀಕ್ಷಕ ಎಚ್‌ಎಸ್‌ಟಿ ಸ್ವಾಮಿ ತಿಳಿಸಿದ್ದಾರೆ.

ಪೂರ್ವದಿಂದ ಪಶ್ಚಿಮ ದಿಗಂತದವರೆಗೆ ರಾತ್ರಿ 8.30ರಿಂದ ಮಂಗಳ,ಗುರು,ಶನಿ,ಶುಕ್ರ ಗ್ರಹಗಳನ್ನು ಬರಿಗಣ್ಣಿನಿಂದಲೂ ಹಾಗೂ ಯುರೇನಸ್, ನೆ ಫ್ಚೂನ್ ಗ್ರಹಗಳನ್ನು ಬೈನಾಕ್ಯೂಲರ್ ಅಥವಾ ದೂರದರ್ಶಕ ನೆರವಿನಿಂದ ನೋಡಬಹುದು. ಬೆಳಗಿನ ಜಾವ ಸೂರ‌್ಯೋದಯಕ್ಕೂ ಮೊದಲು ಬುಧ ಗ್ರಹವನ್ನೂ ಕಾಣಬಹುದೆಂದು ಸ್ವಾಮಿ(9448565534)ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net