ಗ್ರಂಥಾಲಯದಲ್ಲಿ ಸಮಯದ ವ್ಯಯ ಮಾಡಿ

JAN 16-HRP-03
Published on

ಹರಪನಹಳ್ಳಿ: ಇಂದಿನ ಯುವ ಜನರಲ್ಲಿ ಓದುವ ಹವ್ಯಾಸ ಕಡಿಮೆಯಾಗಿ ಮೊಬೈಲ್‌ನ ಗೀಳು ಹೆಚ್ಚಾಗಿದೆ. ಆದ್ದರಿಂದ ಸಾಹಿತ್ಯದ ಅಭಿರುಚಿ ಕಡಿಮೆಯಾಗಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಬಾಗಳಿ ಗ್ರಾಮದ ದಿನವಹಿ ಮಾರುಕಟ್ಟೆಯ ಸಮೀಪವಿರುವ ಗ್ರಂಥಾಲಯದಲ್ಲಿ ‘ಪುಸ್ತಕ ಗೂಡು’ ಗ್ರಂಥಾಲಯ ಉದ್ಘಾಟಿಸಿ ಗುರುವಾರ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಪ್ರಚಲಿತ ವಿದ್ಯಾಮಾನಗಳಾದ ರಾಷ್ಟ್ರ, ರಾಜ್ಯ, ಹೊರ ರಾಜ್ಯಗಳ ಘಟನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಳ್ಳಲು ಮೊಬೈಲ್ ಬಿಟ್ಟು ಗ್ರಂಥಾಲದಲ್ಲಿ ಹೆಚ್ಚು ಸಮಯ ವ್ಯಯ ಮಾಡಬೇಕು. ಇದರಿಂದ ಭವಿಷ್ಯದ ಜೀವನ ಸುಂದರವಾಗಿರುತ್ತದೆ ಎಂದರು.

ತಾಪಂ ಇಒ ಚಂದ್ರಶೇಖರ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ, ಆದರೆ, ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಿ ಜೀವನವನ್ನು ಹಾಳುಮಾಡಿಕೊಂಡಿರುವ ನಿದರ್ಶನ ನೋಡಿದ್ದೇವೆ. ಆದರೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು. ಪುಸ್ತಕ ಗೂಡು ಗ್ರಂಥಾಲಯದಲ್ಲಿ ದೊರೆಯುವ ಪುಸ್ತಕಗಳನ್ನು ಓದಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net