

ಚಿತ್ರದುರ್ಗ:ಗ್ರಾಮ ಡಿಜಿ ವಿಕಸನ ಕಾರ‌್ಯಕ್ರಮ ಗ್ರಾಮೀಣ ಯುವ ಸಮೂಹದ ಅಧ್ಯಯನಕ್ಕೆ ಹೆಚ್ಚಿನ ವರದಾನವಾಗಲಿದೆ,ಈ ನಿಟ್ಟಿನಲ್ಲಿ ಗ್ರಂಥಾಲಯ ಮೇಲ್ವಿಚಾರಕರು ಕಾರ‌್ಯಕ್ರಮದ ಪರಿಣಾಕಾರಿ ಅನುಷ್ಠಾನಕ್ಕೆ ಶ್ರಮಿಸಬೇಕೆಂದು ಜಿಪಂ ಸಿಪಿಒ ಸತೀಶ್‌ರೆಡ್ಡಿ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ,ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಕಂಪನಿ ಸಹಯೋಗದೊಂದಿಗೆ ಗ್ರಾಮ ಡಿಜಿ ವಿಕಸನ ಕಾರ‌್ಯಕ್ರಮದಡಿ ಜಿಪಂದಲ್ಲಿ ಶನಿವಾರ ಜಿಲ್ಲೆಯ 21 ಗ್ರಾಪಂ ಗ್ರಂಥಾಲಯಗಳಿಗೆ ಲ್ಯಾಪ್‌ಟಾಪ್ ಹಾಗೂ ಮಾನಿಟರ್ ವಿತರಣೆ ಕಾರ‌್ಯ ಕ್ರಮದಲ್ಲಿ ಅವರು ಮಾತನಾಡಿ,ವಿದ್ಯಾರ್ಥಿಗಳು,ನಾಗರಿಕರು ಗ್ರಂಥಾಲಯಗಳ ಸದುಪಯೋಗ ಪಡೆದುಕೊಳ್ಳ ಬೇಕೆಂದರು.
ಶಿಕ್ಷಣ ಫೌಂಡೇಶನ್ ಮಧ್ಯಕರ್ನಾಟಕ ಭಾಗದ ಎಜಿಎಂ ಶಂಭುಲಿಂಗ ನಡುವಿನಮನಿ ಅವರು ಮಾತನಾಡಿ,ಯುವಕರು ಉದ್ಯೋಗವನ್ನು ಪಡೆ ಯುವ ನಿಟ್ಟಿನಲ್ಲಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು,ತಂತ್ರಜ್ಞಾನ ಕೌಶಲ್ಯಗಳನ್ನು ಪಡೆದುಕೊಳ್ಳಲು ಹಾಗೂ ವೃತ್ತಿ ಮಾರ್ಗದರ್ಶನಕ್ಕೆ ಡಿಜಿ ವಿಕಸನ ನೆರವಾಗಲಿದೆ ಎಂದರು.
ಫೌಂಡೇಷನ್ ಜಿಲ್ಲಾ ಸಂಯೋಜಕ ಶ್ರೀಧರ್ ಮಾತನಾಡಿ,ಚಳ್ಳಕೆರೆ ತಾಲೂಕಿನ 10 ಗ್ರಾಪಂಗಳಿಗೆ,ಚಿತ್ರದುರ್ಗ-16,ಹಿರಿಯೂರು-10,ಹೊಳ ಲ್ಕೆರೆ-9,ಹೊಸದುರ್ಗ-11ಹಾಗೂ ಮೊಳಕಾಲ್ಮೂರು ತಾಲೂಕಿನ 5 ಗ್ರಾಪಂ ಗ್ರಂಥಾಲಯಗಳು ಸೇರಿ 61 ಗ್ರಂಥಾಲಯಗಳಲ್ಲಿ ಡಿಜಿ ವಿಕಸನ ಕಾ ರ‌್ಯಕ್ರಮ ಅನುಷ್ಠಾನಗೊಳಿಸಲಾಗಿದೆ ಎಂದರು. ಜಿಲ್ಲಾ ಕೇಂದ್ರ ಗ್ರಂಥಾಲಯಾಧಿಕಾರಿ ಪಿ.ಆರ್.ತಿಪ್ಪೇಸ್ವಾಮಿ,ಪ್ರಭು,ಆಶಾ,ಶಬ್ರಿನ್‌ತಾಜ್, ಗುಂಡಮ್ಮ,ಮಹಾಂತೇಶ್,ಶ್ರೀನಿವಾಸ್ ಹಾಗೂ ಗ್ರಾಪಂ ಗ್ರಂಥಾಲಯಗಳ ಮೇಲ್ವಿಚಾರಕರು ಇದ್ದರು.