

ರಾಮದುರ್ಗ: ಪ್ರಚಲಿತ ಎಐ ತಂತ್ರಜ್ಞಾನ ಬಳಸಿ ಗ್ರಂಥಾಲಯದಲ್ಲಿ ಪರಿಣಾಮಕಾರಿ ಕ್ರಾಂತಿ ಮಾಡುವುದರ ಜತೆಗೆ ಗ್ರಂಥಾಲಯಲದಲ್ಲಿ ಸಿಗುವ ಮೌಲ್ಯಯುತ ಜ್ಞಾನದ ಸಂಪನ್ಮೂಲಗಳನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದು ಡಾ.ಜಿ.ಬಿ. ಮುರಗೋಡ ಹೇಳಿದರು.
ಪಟ್ಟಣದ ಸಿಎಸ್ಬಿ ಕಲಾ, ಶಾ.ಎಂ.ಆರ್.ಪಿ. ವಿಜ್ಞಾನ ಹಾಗೂ ಜಿ.ಎಲ್.ಆರ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 132ನೆಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಂಥಾಲಯಗಳು ಜಗತ್ತಿನ ಮಾಹಿತಿ ಕಣಜ. ಆಧುನಿಕ ತಂತ್ರಜ್ಞಾನದಿಂದ ಣಾರ್ಧದಲ್ಲಿ ಎಲ್ಲ ಮಾಹಿತಿ ಪಡೆಯಬಹುದಾಗಿದೆ ಎಂದರು.
ಪ್ರಭಾರಿ ಪ್ರಾಚಾರ್ಯ ಡಾ.ಎಚ್.ಪಿ ಹಾಲೊಳ್ಳಿ, ಗ್ರಂಥಪಾಲಕ ಶಿವರಾಜ ಹಲ್ಯಾಳ ಮಾತನಾಡಿದರು. ಕಾಲೇಜಿನ ಉಪನ್ಯಾಸಕ ವಂದ,
ವಿದ್ಯಾರ್ಥಿಗಳು ಹಾಗೂ ಇತರರಿದ್ದರು. ವಿಜಯಕುಮಾರ ಮುಗಟೆ ಸ್ವಾಗತಿಸಿದರು. ಎಸ್.ಎಂ.ಬಡಕಪ್ಪನವರ ನಿರೂಪಿಸಿದರು.