ಗ್ರಂಥಾಲಯ ಸಪ್ತಾಹ, ವಿವಿಧ ಸ್ಪರ್ಧೆ

Granthalaya
Published on

ಚಿತ್ರದುರ್ಗ: ನಗರ ಕೇಂದ್ರ ಗ್ರಂಥಾಲಯ ಆವರಣದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಅಂಗವಾಗಿ ಬುಧವಾರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಚಿತ್ರಕಲೆ, ಪ್ರಬಂಧ ಸ್ಪರ್ಧೆ ನಡೆಯಿತು.

ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಕೈಯಲ್ಲಿ ಕುಂಚ ಹಿಡಿದು ಪ್ರಕೃತಿ, ಸೂರ್ಯ, ಚಿಟ್ಟೆಗಳು, ಕಾಮನಬಿಲ್ಲು, ಪ್ರಾಣಿ, ಪಕ್ಷಿಗಳು, ಬೆಟ್ಟ-ಗುಡ್ಡ ಹೀಗೆ.. ನಮ್ಮ ಪರಿಸರ ಎಂಬ ವಿಷಯದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬಿಡಿಸಿದರು.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಗ್ರಂಥಾಲಯ ಮಹತ್ವ, ಪಿಯುಸಿ ವಿದ್ಯಾರ್ಥಿಗಳಿಗೆ ನಮ್ಮ ತರಾಸು ಜೀವನ ಚರಿತ್ರೆ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು.

ಮುಖ್ಯ ಗ್ರಂಥಾಲಯಾಧಿಕಾರಿ ಕೊಳ್ಳಿ ಬಸವರಾಜ್, ಸಹ ಗ್ರಂಥಪಾಲಕ ಮೋಹನ್‌ದಾಸ್, ದ್ವಿತೀಯ ದರ್ಜೆ ಸಹಾಯಕ ಮಹೇಶ್ ಬಾರೆಕರ, ಸಿಬ್ಬಂದಿಗಳಾದ ಮೀನಾಕ್ಷಮ್ಮ, ಗೌರಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net