ಗ್ರಂಥಾಲಯ ಬಳಿ ಅವ್ಯವಸ್ಥೆ

7Anand1
Published on

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಮನಗುತ್ತಿ ಗ್ರಾಮದ ಸಾರ್ವಜನಿಕ ಗ್ರಂಥಾಲಯದ ಮುಂಭಾಗ ಅಽಕಾರಿಗಳ ಬೇಜವಾಬ್ದಾರಿಯಿಂದ ಅವ್ಯವಸ್ಥೆ ತಾಂಡವಾಡುತ್ತಿದೆ. ಪರಿಣಾಮ ಓದುಗರು ಗ್ರಂಥಾಲಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಗ್ರಾಮದಲ್ಲಿ ಅಂದಾಜು ೬ ಸಾವಿರ ಜನಸಂಖ್ಯೆ ಇದೆ. ಗ್ರಂಥಾಲಯಕ್ಕೆ ಓದಲು ಬರುವ ವಿದ್ಯಾರ್ಥಿಗಳು ಹಾಗೂ ವೃದ್ಧರಿಗೆ ಸರಿಯಾದ ದಾರಿ ಇಲ್ಲದೇ ಪರದಾಡುತ್ತಿದ್ದಾರೆ. ಇನ್ನೂ ಸ್ವಚ್ಛತೆ ಇಲ್ಲವೇ ಇಲ್ಲ. ಗ್ರಂಥಾಲಯದ ಮುಂಭಾಗದಲ್ಲಿ ತೆರೆದ ಬಾವಿ ಇರುವುದರಿಂದ ಪಾಲಕರು ಮಕ್ಕಳನ್ನು ಓದಲು ಕಳುಹಿಸಲು ಹಿಂಜರಿಯುತ್ತಿದ್ದಾರೆ. ಇದರ ಜತೆಗೆ ಗ್ರಂಥಾಲಯದ ಸಿಬ್ಬಂದಿ ಸರಿಯಾಗಿ ಬಾಗಿಲು ತೆರೆಯುದಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಗ್ರಂಥಾಲಯದ ಮುಂಭಾಗದಲ್ಲಿರುವ ತೆರೆದ ಬಾವಿಗೆ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಂತಿ ಜಾಳಿಗೆ ಅಳವಡಿಸಲು ಸೂಚಿಸಲಾಗಿದೆ. ವಾತಾವರಣ ಶುಚಿತ್ವಕ್ಕೂ ಆದ್ಯತೆ ನೀಡಿ, ಇನ್ನೇರಡು ದಿನಗಳಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುವುದು. | ಆನಂದ ಹೋಳೆನ್ನವರ ಪಿಡಿಒ ಮನಗುತ್ತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net