ಗ್ರಂಥಾಲಯ ಆವರಣದ ಮರ ಕಡಿಯುವುದಕ್ಕೆ ವಿರೋಧ

CTD----1
Published on

ಚಿತ್ರದುರ್ಗ: ನಗರದ ಶ್ರೀ ಕೃಷ್ಣರಾಜೇಂದ್ರ ಕೇಂದ್ರ ಗ್ರಂಥಾಲಯ ಆವರಣದಲ್ಲಿರುವ ಮರಗಳನ್ನು ಕಡಿಯದಂತೆ ವಿವಿಧ ಸಂಸ್ಥೆಗಳು ಅಧಿಕಾರಿಗಳಿಗೆ ಸೋಮವಾರ ಮನವಿ ಮಾಡಿವೆ.

ಗ್ರಂಥಾಲಯ ಆವರಣದಲ್ಲಿ ಇಉಐಘ ಯೋಜನೆಯಡಿ ಹೆಚ್ಚುವರಿ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಆದರೆ, ಕಟ್ಟಡ ನಿರ್ಮಾಣ ಜಾಗದಲ್ಲಿರುವ ಮರಗಳ ತೆರವಿಗೆ ಡಿಸಿಎಫ್ ಅನುಮತಿ ನೀಡಿರುತ್ತಾರೆ. ಗ್ರಂಥಾಲಯ ಇಲಾಖೆ ಕಾಮಗಾರಿಗೆ ಟೆಂಡರ್ ಕರೆದಿದೆ. ಮರಗಳನ್ನು ಕಡಿಯಬಾರದು. ನಮ್ಮ ಪರಿಸರಕ್ಕಾಗಿ ನಾವು ಸಂಘಟನೆ ಹಾಗೂ ಕರ್ನಾಟಕ ರೈತ ಕಾರ್ಮಿಕ ಯುವ ಒಕ್ಕೂಟದ ಪದಾಧಿಕಾರಿಗಳು ಮರ ಕಡಿಯುವುದನ್ನು ವಿರೋಧಿಸಿ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಬಸವರಾಜಕೊಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ರೈನ್‌ಟ್ರಸ್ಟ್ ಸಂಸ್ಥೆ ಕಾರ್ಯದರ್ಶಿ ಎಂ. ಮಂಜುನಾಥ್ ಕಳ್ಳಿಹಟ್ಟಿ, ಪರಿಸರಕ್ಕಾಗಿ ನಾವು ಸಂಘಟನೆ ಮುಖ್ಯಸ್ಥ ಎಂ.ಬಿ. ಜಯದೇವ ಮೂರ್ತಿ, ಶಿವರುದ್ರಪ್ಪ ಪಂಡರಹಳ್ಳಿ, ಕಡ್ಲೇಗುದ್ದು ಮಹೇಶ್, ಕರ್ನಾಟಕ ರೈತ ಕಾರ್ಮಿಕ ಯುವ ಒಕ್ಕೂಟದ ಅಧ್ಯಕ್ಷ ಎಂ.ಎಚ್. ಶಶಿಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net