ಗ್ರಂಥಾಲಯ ಆಕರ್ಷಣೀಯ ಕೇಂದ್ರಗಳಾಗಲಿ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚನೆ

WhatsApp Image 2023-07-19 at 6.17.30 PM
Published on

ಕೊಪ್ಪಳ:ಗ್ರಾಮ ಪಂಚಾಯಿತಿ ಗ್ರಂಥಾಲಯಗಳು ಮಕ್ಕಳ ಓದಿಗೆ ಸಹಕಾರಿಯಾಗಿದ್ದು, ವಿನೂತನ ಚಟುವಟಿಕೆಗಳ ಮೂಲಕ ಮಾದರಿ ಗ್ರಂಥಾಲಯಗಳನ್ನಾಗಿ ಮಾಡಿ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಸೂಚಿಸಿದರು.

ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಗ್ರಂಥಪಾಲಕರಿಗೆ ಬುಧವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಸಾಮರ್ಥ್ಯ ಬಲವರ್ಧನೆ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿವಾರ ನಿಗದಿಪಡಿಸಿದ ವಿನೂತನ ಕಾರ್ಯಕ್ರಮಗಳನ್ನು ವೇಳಾಪಟ್ಟಿಯಂತೆ ಅನುಷ್ಠಾನ ಮಾಡಿ. ಗ್ರಂಥಾಲಯಗಳಿಗೆ ಅಗತ್ಯ ಸೌಲಭ್ಯ ಒದಗಿಸಲು ಇಗಾಗಲೇ ಪಿಡಿಒಗಳಿಗೆ ಸೂಚಿಸಲಾಗಿದೆ. ಗ್ರಂಥಪಾಲಕರು ಪ್ರತಿ ದಿನ ಕಡ್ಡಾಯವಾಗಿ ಇ-ಹಾಜರಾತಿ ಹಾಕಬೇಕು. ಪ್ರತಿ ಶಾಲೆಗೆ ಮಕ್ಕಳ ಓದಿಗೆ ಸಮಯ ನಿಗದಿಪಡಿಸಿ. ಇದರಿಂದ ಎಲ್ಲ ಮಕ್ಕಳಿಗೆ ಓದಿಗೆ ಅನುಕೂಲವಾಗಲಿದೆ. ವಿನೂತನ ಕಾರ್ಯಕ್ರಮದ ಫೋಟೋ, ವಿಡಿಯೋ ದಾಖಲೆಗಳನ್ನು ಕಡ್ಡಾಯವಾಗಿ ಗ್ರೂಪ್‌ನಲ್ಲಿ ಹಂಚಿಕೊಳ್ಳಬೇಕು. ಮಕ್ಕಳ ನೋಂದಣಿ ಮಾಡಿಕೊಳ್ಳಿ. ಸ್ವಚ್ಛತೆ ಕಾಪಾಡಿ. ಮಕ್ಕಳನ್ನು ಆಕರ್ಷಿಸುವಂತೆ ವಾತಾವರಣ ನಿರ್ಮಿಸಿ ಎಂದು ಸಲಹೆ ನೀಡಿದರು.

ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಪಂಚಾಯತ್ ರಾಜ್ ಸಹಾಯಕ ನಿರ್ದೆಶಕ ಮಹೇಶ್ ಚ್., ಸಹಾಯಕ ಲೆಕ್ಕಾಧಿಕಾರಿ ರವಿಕುಮಾರ, ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಕೆ, ಎಸ್‌ಬಿಎಂ ನೋಡಲ್ ಅಧಿಕಾರಿ ಜ್ಯೋತಿ ರಡ್ಡೇರ, ಜಿಲ್ಲಾ ಗ್ರಂಥಾಲಯ ಅಧಿಕಾರಿ ನಾಗರಾಜ ಡೊಳ್ಳಿನ, ಎಸ್‌ಐಆರ್‌ಡಿ ತರಬೇತಿ ಸಂಪನ್ಮೂಲ ವ್ಯಕ್ತಿ ಎಚ್, ಎಸ್, ಹೊನ್ನುಂಚಿ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, 32ಗ್ರಾಪಂ ಗ್ರಂಥಪಾಲಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net