ಗ್ರಂಥಪಾಲಕರ ಬಹುದಿನಗಳ ಬೇಡಿಕೆ ಈಡೇರಿಕೆ

Ambareesh Metre
Published on

ಬೀದರ್: ರಾಜ್ಯ ಸರ್ಕಾರ ಕನಿಷ್ಠ ವೇತನ ಜಾರಿಗೆ ಆದೇಶಿಸುವ ಮೂಲಕ ಗ್ರಾಮೀಣ ಗ್ರಂಥಪಾಲಕರ ಬಹು ದಿನಗಳ ಬೇಡಿಕೆ ಈಡೇರಿಸಿದೆ ಎಂದು ಜಿಲ್ಲಾ ಗ್ರಂಥಪಾಲಕರ ಸಂಘದ ಅಧ್ಯಕ್ಷ ಅಂಬರೀಷ್ ಬಿ. ಮೇತ್ರೆ ಹೇಳಿದ್ದಾರೆ.
ಗೌರವ ಧನ ರದ್ದುಪಡಿಸಿ, ಕನಿಷ್ಠ ವೇತನ ಜಾರಿಗೊಳಿಸಿದ ಕ್ರಮ ಸ್ವಾಗರ್ತಾಹವಾಗಿದೆ ಎಂದು ಹೇಳಿದ್ದಾರೆ.
ಕನಿಷ್ಠ ವೇತನ ಜಾರಿಗಾಗಿ ಸಂಘದಿಂದ ಸತತ ಹೋರಾಟ ನಡೆಸಲಾಗಿತ್ತು. ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರಲಾಗಿತ್ತು. ಕೊನೆಗೂ ಸಂಘದ ಬೇಡಿಕೆ ಮನ್ನಿಸಿ ಸರ್ಕಾರ ಕ್ರಮ ಕೈಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಇಲಾಖೆ ಉನ್ನತ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net