ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿ ಬೆಂಕಿ

2bkl2 (1)
Published on

ಭಟ್ಕಳ: ತಂದೆಯ ತಿಥಿ ಕಾರ್ಯ ನಡೆಯುತ್ತಿದ್ದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿ ಬೆಂಕಿ ತಗುಲಿದ ಘಟನೆ ಶಿರಾಲಿ ತಟ್ಟಿಹಕ್ಕಲಿನಲ್ಲಿ ಶುಕ್ರವಾರ ನಡೆದಿದೆ.

ವೆಂಕಟೇಶ ಲಕ್ಷ್ಮೀನಾರಾಯಣ ಶಾನಭಾಗ ಎನ್ನುವವರ ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಸೋರಿಕೆಯಾಗಿದೆ. ಈ ಘಟನೆಯಲ್ಲಿ ಮನೆಯಲ್ಲಿದ್ದವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಂದೆ ಕಾರ್ಯ ಹಿನ್ನೆಲೆ ಅಡುಗೆ ಮಾಡುತ್ತಿದ್ದ ವೇಳೆ ಗ್ಯಾಸ್ ಸೋರಿಕೆಯಾಗಿ ಏಕಾಏಕಿ ಬೆಂಕಿ ತಗುಲಿದೆ. ತಕ್ಷಣ ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿ ಮನೆಯಲ್ಲಿದ್ದವರ ರಕ್ಷಣೆ ಮಾಡಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸ್​ಐ ಭರತ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಎಸ್ ರಮೇಶ, ಮನೋಜ ಬಾಡ್ಕರ್, ನಾರಾಯಣ ಪಟಗಾರ, ಕುಮಾರ ನಾಯ್ಕ, ಪುರುಷೋತ್ತಮ ನಾಯ್ಕ, ಅಕ್ಷಯ ಹಿರೇಮಠ, ಗೃಹ ರಕ್ಷಕ ಸಿಬ್ಬಂದಿ ಕುಮಾರ ನಾಯ್ಕ ಮತ್ತು ಮಂಜು ಶೇಟ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net