ಗ್ಯಾರೇಜ್​ನಲ್ಲಿದ್ದ ಆರು ಬೈಕ್ ಭಸ್ಮ

24HNL2
Published on

ಹಾನಗಲ್ಲ: ವಿದ್ಯುತ್ ಅವಘಡದಿಂದಾಗಿ ಬೈಕ್ ಗ್ಯಾರೇಜ್​ವೊಂದು ಹೊತ್ತಿ ಉರಿದ ಘಟನೆ ತಾಲೂಕಿನ ಗೊಂದಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಗೊಂದಿ ಗ್ರಾಮದ ಅರುಣ ಮೋಟರ್ಸ್​ನಲ್ಲಿ ರಿಪೇರಿಗಾಗಿ ಗ್ರಾಹಕರು ನೀಡಿದ್ದ ಆರು ಬೈಕ್​ಗಳು ಬೆಂಕಿಗೆ ಆಹುತಿಯಾಗಿವೆ. ಗ್ಯಾರೇಜ್ ಅರುಣ ಕ್ಷೌರದ ಎಂಬುವವರಿಗೆ ಸೇರಿದೆ. ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಿದ ನಂತರ ಅವಘಡ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ತೆರಳಿ ಬೆಂಕಿ ನಂದಿಸಿದರು. ಆಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net