ಗ್ಯಾರೆಂಟಿ ಯೋಜನೆ ಬಿಂಬಿಸುವ ವಸ್ತುಪ್ರದರ್ಶನ

CTD GARANTE ---
Published on

ಚಿತ್ರದುರ್ಗ: ಜಿಲ್ಲಾಡಳಿತ,ಜಿಪಂ,ವಾರ್ತಾ ಇಲಾಖೆಯಿಂದ ಶನಿವಾರ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ರಾಜ್ಯಸರ್ಕಾರ ದ 2 ವರ್ಷಗಳ ಅಭಿವೃದ್ಧಿ ಸಾಧನೆ,ಗ್ಯಾರಂಟಿಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಶನಿವಾರ ಚಾಲನೆ ನೀಡಿದರು.

ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ,ಗೃಹಲಕ್ಷ್ಮೀ,ಅನ್ನಭಾಗ್ಯ,ಯುವನಿಧಿ,ಗೃಹಜ್ಯೋತಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆ ಗಳನ್ನೊಳಗೊಂಡ ಸಮಗ್ರ ಮಾಹಿತಿಯುಳ್ಳ ಫಲಕಗಳನ್ನು ಸಚಿವರು,ಶಾಸಕ ಟಿ.ರಘಮೂರ್ತಿ ಸೇರಿದಂತೆ ಗಣ್ಯರು ವೀಕ್ಷಿಸಿದರು.

ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್ ಭಾವಚಿತ್ರಗಳನ್ನು ಒಳಗೊಂಡ ಸೆಲ್ಫಿ ಪಾಯಿಂಟ್‌ಗಳನ್ನು ವೀಕ್ಷಿಸಿ ಪ್ರಶಂಸಿದ ಸಚಿವರು, ರಘು ಮೂರ್ತಿ ಅವರೊಂದಿಗೆ ಪೋಟೊ ತೆಗೆಸಿಕೊಂಡರು. ನಾನಾ ಗಣ್ಯರು ಸೆಲ್ಫಿಪಾಯಿಂಟ್‌ನಲ್ಲಿ ಪೋಟೊ ತೆಗೆಸಿಕೊಂಡು ಸಂತಸ ವ್ಯಕ್ತಪಡಿಸಿದರು. ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆಗಳನ್ನೊಳಗೊಂಡ ಪುಸ್ತಕವನ್ನು ಸಿಎಂ ಅವರಿಂದ ಪಡೆದಂತೆ ಬಿಂಬಿಸುವ ಸೆಲ್ಫಿ ತೆಗೆದುಕೊಂಡು ಸಾರ್ವಜನಿಕರು ಸಂಭ್ರಮಿಸಿದರು.

ಸರ್ಕಾರಿ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ದೊರಕಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಈ ವಸ್ತು ಪ್ರದರ್ಶ ನ ಜೂ.30ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾಹಿತಿ ಹೇಳಿದ ರು.

ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್,ಎಡಿಸಿ ಬಿ.ಟಿ.ಕುಮಾರಸ್ವಾಮಿ,ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ,ತಾಲೂಕು ಅಧ್ಯಕ್ಷ ಪ್ರಕಾಶ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್,ಡಿವೈ ಎಸ್‌ಪಿ ದಿನಕರ್ ಮತ್ತಿತರರು ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net