ಗ್ಯಾರಂಟಿಗೆ ಪರಿಶಿಷ್ಟರ ಹಣ ಯಾವ ನ್ಯಾಯ

Buddha
Published on

ಚಿತ್ರದುರ್ಗ: ಪರಿಶಿಷ್ಟರಿಗೆ ಮೀಸಲಿರುವ ನಿಧಿಯಿಂದ 15,553 ಕೋಟಿ ರೂ. ಹಣವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ಪಡೆದಿರುವುದು ಯಾವ ನ್ಯಾಯ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಪ್ರಶ್ನಿಸಿದರು.

ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಎಸ್ಸಿಎಸ್ಟಿ ಮತ್ತು ಟಿಎಸ್‌ಪಿ ಹಣ ದುರ್ಬಳಕೆ ತಡೆಯುವುದು ಹೇಗೆ ಎಂಬ ವಿಷಯದ ಕುರಿತು ಮಾತನಾಡಿದರು.

ಎಲ್ಲ ಜಾತಿ-ಧರ್ಮದವರಿಗೂ ಅನ್ವಯಿಸುವ ಗ್ಯಾರಂಟಿ ಯೋಜನೆಗಳಿಗೆ ದಲಿತರ ಹಣ ಬಳಸುವುದು ಯಾವ ರೀತಿಯಿಂದಲೂ ಸಮರ್ಥನಿಯವಲ್ಲ. ಪರಿಶಿಷ್ಟರಿಗೆ ಮೀಸಲಿರುವ ನಿಧಿಯನ್ನು ಅನ್ಯ ಕಾರ್ಯಗಳಿಗೆ ಬಳಸುವುದು ಪರಿಶಿಷ್ಟ ಜಾತಿಗಳಿಗೆ ಮಾಡುವ ಅನ್ಯಾಯ. ಇದಕ್ಕೆ ಕಡಿವಾಣ ಹಾಕುವಂತ ಕಾನೂನು ಕೇಂದ್ರ ಸರ್ಕಾರ ರೂಪಿಸಬೇಕು ಎಂದು ಒತ್ತಾಯಿಸಿದರು.

ಬೆವಿಕಂ ಕಚೇರಿ ಮುಖ್ಯ ಇಂಜಿನಿಯರ್ ಎಂ.ರೋಮರಾಜು, ಅರಸೀಕೆರೆ ಸೂಪರ್ವೈಸರ್ ಗ್ರೇಡ್ 2 ಕೆ.ಶ್ರೀನಿವಾಸ್, ಕಿರಿಯ ಇಂಜಿನಿಯರ್ ಎಂ.ಹೊನ್ನೂಜಿ, ಬನ್ನಿಕೊಡು ಹನುಮಂತಪ್ಪ, ಉಪನ್ಯಾಸಕ ಈ.ನಾಗೇಂದ್ರಪ್ಪ, ಬೆಸ್ಕಾಂ ತಿಪ್ಪೇಸ್ವಾಮಿ, ಚಳ್ಳಕೆರೆ ಹರೀಶ್, ಶಿಕ್ಷಕರಾದ ಹರೀಶ್, ಗಿರೀಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net