ಗ್ಯಾರಂಟಿಗಳಿಂದ ಶಾಸಕರಿಗೆ ಅನುದಾನ ಕಡಿಮೆ ಅಬಿವೃದ್ದಿ ಕುಂಠಿತ: ಶಾಸಕ ಎಚ್.ಪಿ.ಸ್ವರೂಪ್

ಗ್ಯಾರಂಟಿಗಳಿಂದ ಶಾಸಕರಿಗೆ ಅನುದಾನ ಕಡಿಮೆ ಅಬಿವೃದ್ದಿ ಕುಂಠಿತ: ಶಾಸಕ ಎಚ್.ಪಿ.ಸ್ವರೂಪ್
Published on

ಹಾಸನ: ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಿಂದ ಶಾಸಕರ ನಿಧಿ ಬಹಳಷ್ಟು ಕಡಿಮೆಯಾಗದೆ.ಈವರೆಗೆ ಕೇಲವ 1 ಕೋಟಿರೂ. ಅನುದಾನ ನೀಡಿದ್ದಾರೆ ಇದ್ದರಿಂದ ಅಬಿವೃದ್ದಿ ಕುಂಠಿತವಾಗಿದೆ ಎಂದು ಶಾಸಕ ಎಚ್.ಪಿ.ಸ್ವರೂಪ್ ಅಸಮಾಧಾನ ವ್ಯಕ್ತಡಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ನಂತರ ಅನುದಾನ ಬರಬಹುದು ಎಂದು ಭಾವಿಸಿದ್ದೇನೆ, ಅದೇ ನಿರೀಕ್ಷೆಯಲ್ಲಿದ್ದೇನೆ. ಮುಂದಿನ ದಿನಗಳಲ್ಲಿ ಅನುದಾನ ತಂದು ಹೆಚ್ಚು ಕೆಲಸ ಮಾಡಬೇಕು ಎಂದು ಆಸೆಯಿಂದಲೇ ಶಾಸಕರಾಗಿ ಬಂದಿದ್ದೇವೆ. ಖಂಡಿತವಾಗಿಯೂ ಲೋಕಸಭಾ ಚುನಾವಣೆ ನಂತರ ಅನುದಾನ ತಂದು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಹಾಸನ ಜೆಡಿಎಸ್ ಭದ್ರಕೋಟೆ, ಶಾಸಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಟಿಕೆಟ್ ಸಿಗಲಿದೆ. ಪ್ರಜ್ವಲ್ ರೇವಣ್ಣ ಅವರೇ ಅಭ್ಯರ್ಥಿ ವಿಶ್ವಾಸ ವ್ಯಕ್ತಪಡಿಸಿದರು.
ಹಾಸನವನ್ನು ಮಾಜಿ ಪ್ರಧಾನಿ ದೇವೇಗೌಡರು ಪ್ರತಿನಿಧಿಸಿ ರಾಜ್ಯ, ರಾಷ್ಟ್ರ ಮಾತ್ರವಲ್ಲ, ವಿಶ್ವದಲ್ಲೇ ಹೆಸರು ಮಾಡಿದ್ದಾರೆ. ಹೀಗಾಗಿ ಹಾಸನ ಲೋಕಸಭಾ ಕ್ಷೇತ್ರದ ಟಿಕೆಟ್ ನಮ್ಮ ಪಕ್ಷಕ್ಕೆ ನೀಡುತ್ತಾರೆ. ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಾಗಲೇ ಹಿರಿಯರಾದ ದೇವೇಗೌಡರು ಹಲವು ಬಾರಿ ಇದನ್ನೇ ಹೇಳಿದ್ದಾರೆ ಎಂದರು.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ದೇವೇಗೌಡರು ಮತ್ತವರ ಕುಟುಂಬಕ್ಕೆ ಚಿರಋಣಿಯಾಗಿರುವವನು, ಯಾವುದೇ ಪಕ್ಷದ ಜೊತೆ ದೇವೇಗೌಡರು, ಕುಮಾರಸ್ವಾಮಿ ಅವರು ಸೇರಿ ಏನು ನಿಲುವು ತೆಗೆದುಕೊಳ್ಳುತ್ತಾರೋ ಅವರ ನಿಲುವಿನೊಂದಿಗೆ ಸದಾ ಬದ್ಧನಾಗಿರುವೆ. ಹಾಸನ ಕ್ಷೇತ್ರದ ಟಿಕೆಟ್ ಬಿಜೆಪಿಗೆ ಸಿಗಲಿದೆ ಎಂಬ ಆ ಪಕ್ಷದ ನಾಯಕರ ಹೇಳಿಕೆಯನ್ನು ನಾನು ಚರ್ಚಿಸಲು ಹೋಗುವುದಿಲ್ಲ ಎಂದರು.

ನಿಖಿಲ್ ಚುನಾವಣೆಗೆ ಸ್ಪರ್ಧಿಸಲಿ:
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಬರುವ ಲೋಕಸಭೆ ಚುನಾವಣೆಯಲ್ಲಿ ನಿಲ್ಲಬೇಕು ಎಂಬುವುದು ಕಾರ್ಯಕರ್ತರು ಮತ್ತು ನನ್ನ ಭಾವನೆ ಕೂಡ ಅದೇ ಎಂದು ಎಚ್.ಪಿ.ಸ್ವರೂಪ್ ಹೇಳಿದರು.
ಮಂಡ್ಯದಿಂದ ಸ್ಪರ್ಧಿಸುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾನು ರಾಜ್ಯ ರಾಜಕೀಯಕ್ಕೆ ಹೋಗಿಲ್ಲ, ಹಾಸನಕ್ಕೆ ಮಾತ್ರ ಸೀಮಿತವಾಗಿದ್ದೇನೆ. ವೈಯಕ್ತಿಕವಾಗಿ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲಬೇಕು ಎಂದು ಬಯಸುತ್ತೇನೆ. ನಿಖಿಲ್ ಅವರನ್ನು ಪಕ್ಷದಲ್ಲಿ ಎಲ್ಲರೂ ಹತ್ತಿರದಿಂದ ನೋಡಿದ್ದಾರೆ. ಅವರು ಚುನಾವಣೆಗೆ ನಿಲ್ಲಬೇಕು ಎಂಬುವುದು ಎಲ್ಲಾರ ಭಾವನೆ ಕೂಡ. ಆದರೆ ವೈಯಕ್ತಿಕವಾಗಿ ಅವರು ಯಾವ ರೀತಿ ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ಒಮ್ಮತವಾಗಿ ಎಲ್ಲರೂ ಕೂಡ ಬೆಂಬಲಿಸುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net