

ಚಿತ್ರದುರ್ಗ: ಎಲ್ಲ ಗ್ಯಾರೆಂಟಿಗಳ ಅನುಷ್ಠಾನ ಜತೆಗೆ ಕಾರ್ಮಿಕರಿಗೆ ಉದ್ಯೋಗ ಭದ್ರತೆ ಒದಗಿಸಿ 31 ಸಾವಿರ ರೂ.ಕನಿಷ್ಠ ವೇತನ ನಿಗದಿಪಡಿಸುವಂತೆ ರಾಜ್ಯಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಧ್ಯಕ್ಷ ಎಚ್.ಜಿ.ಉಮೇಶ್ ಆವರಗೆರೆ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಎಐಟಿಯುಸಿ ಹಾಗೂ ಕ್ವಾರಿ ಕಾರ್ಮಿಕರ ಸಂಘಟನೆ ಸಂಯುಕ್ತಾಶ್ರಯದಲ್ಲಿ ನಗರದ ಎಪಿಎಂಸಿ ರೈತ ಭವನದಲ್ಲಿ ಮಂಗಳವಾರ ಏ ರ್ಪಡಿಸಿದ್ದ ಕಾರ್ಮಿಕರ 4ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದ ಅವರು,ಬೇಡಿಕೆ ಈಡೇರಿಸಿದ್ದರೆ ಆಗಸ್ಟ್-ಸೆಪ್ಟೆಂಬರ್‌ನಲ್ಲಿ ವಿವಿಧ ಕಾ ರ್ಮಿಕ ಸಂಘಟನೆಗಳ ಜತೆಗೂಡಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದರು.
ಹಿಂದಿನ ಸಿಎಂ ಎಚ್‌ಡಿ ದೇವೇಗೌಡರ ಅವಧಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನಿರ್ಮಾಣವಾಯಿ ತು. 2019-20ರಲ್ಲಿ ಈ ಮಂಡಳಿಯಲ್ಲಿದ್ದ 16600 ಕೋಟಿ ರೂ.ಮೊತ್ತವು 12 ಸಾವಿರ ಕೋಟಿ ರೂ.ಗೆ ಕುಸಿಯಿತು. ಹಿಂದಿನ ಸರ್ಕಾರ ದ ಕಾರ್ಮಿಕ ಸಚಿವ ಶಿವರಾಂಹೆಬ್ಬಾರ್ ಅವಧಿ ಮಂಡಳಿ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು.
ಕೋವಿಡ್ ಸಂದರ್ಭದಲ್ಲಿ ವಿತರಿಸಿದ್ದ ಕಿಟ್‌ಗಳಲ್ಲಿ ಸಾಕಷ್ಟು ಲೂಟಿಯಾಗಿದೆ. ನೈಜ ಕಾರ್ಮಿಕರು ಸರ್ಕಾರದ ಸೌಲಭ್ಯಗಳಿಂದ ವಂಚಿತ ರಾಗುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಸೂಕ್ತ ತನಿಖೆ ಅಗತ್ಯವಿದೆ. ಸರ್ಕಾರ ಮತ್ತು ಸಂಘಟನೆ ನಡುವೆ ಸಂಘರ್ಷವಿದ್ದೆ ಇರುತ್ತದೆ. ರಾಜ್ಯ ಸರ್ಕಾರ ಅಕ್ಕಿ ಬದಲು ಹಣ ಕೊಡುತ್ತಿ ರುವುದು ಒಳ್ಳೆಯ ಕೆಲಸವಾಗಿದೆ ಎಂದರು.
ಸಂಘದ ಪ್ರಧಾನ ಕಾರ‌್ಯದರ್ಶಿ ಗಿರೀಶ್ ಮಾತನಾಡಿ,ಹಿಂದಿನ ಸರ್ಕಾರದಲ್ಲಾದ ಮಂಡಳಿ ಕೋಟ್ಯಂತರ ರೂ.ದುರುಪಯೋಗದ ಕು ರಿತಂತೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಲಾಗಿತ್ತು. ಈ ಹಿಂದೆ ಮಂಡಳಿ,ಬಿಜೆಪಿಯ ಕಲ್ಯಾಣ ಮಂಡಳಿಯಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಐಟಿಯುಸಿ ಜಿಲ್ಲಾ ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಬಿ.ಬಸವರಾಜಪ್ಪ,ಜಿ.ಸಿ.ಸುರೇಶ್‌ಬಾಬು,ದೊಡ್ಡುಳ್ಳಾರ್ತಿ ಕರಿಯಣ್ಣ,ಬಿ.ಹೆಚ್.ಹನುಮಂತಪ್ಪ, ಎಂ.ಬಿ. ಜಯದೇವಮೂರ್ತಿ, ಟಿ.ಆರ್.ಉಮಾಪತಿ,ಬಿ.ರಾಜಪ್ಪ,ಎಸ್.ಸಿ.ಕುಮಾರ್,ಜಾಫರ್‌ಷರೀಫ್,ಎನ್.ಸಿ.ಕುಮಾರಸ್ವಾಮಿ,ಅಮಿನಾಭಿ, ಸತ್ಯಕೀರ್ತಿ ಮತ್ತಿತರರು ಇದ್ದರು.