

ಗೋಕಾಕ: ಸರ್ಕಾರಿ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಜನತೆ ನೆಮ್ಮದಿಯ ಬದುಕು ನಡೆಸಿ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ತಾಲೂಕು ಆಡಳಿತ ಮತ್ತು ನಗರಸಭೆಗಳ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗಹಲಕ್ಷ್ಮೀ ಯೋಜನೆಯ ಉದ್ಘಾಟನಾ ಸಮಾರಂಭವನ್ನು ಸಸಿಗೆ ನೀರುಣಿಸುವ ಮೂಲಕ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನ 1.10 ಲಕ್ಷ ಮಹಿಳೆಯರು ಇದ್ದಾರೆ. ಅದರಲ್ಲಿ 85 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಉಳಿದವರು ಸಹ ಬೇಗನೆ ಅರ್ಜಿ ಸಲ್ಲಿಸಿ ಗಹಲಕ್ಷ್ಮೀ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಹಸೀಲ್ದಾರ್ ಕೆ.ಮಂಜುನಾಥ್ ಮಾತನಾಡಿದರು. ಪೌರಾಯುಕ್ತ ಎಸ್.ಎ. ಮಹಾಜನ, ತಾಪಂ ಇಒ ಉದಯಕುಮಾರ್ ಕಾಂಬ್ಳೆ, ಶಿಶು ಅಭಿವದ್ಧಿ ಅಧಿಕಾರಿ ಡಿ.ಎಸ್.ಕುಡವಕ್ಕಲಗಿ, ನಗರಸಭೆ ಅಧೀಕ್ಷಕ ಸಾಗರೆಕರ ಇತರರು ಇದ್ದರು.