

ಚಿಕ್ಕಮಗಳೂರು: ಗೃಹಲಕ್ಷಿö್ಮÃ ಯೋಜನೆಯಲ್ಲಿ ತಾಲೂಕಿನ ೬೯,೩೭೬ ಕುಟುಂಬದ ಯಜಮಾನಿಗೆ ಪ್ರತಿ ಮಾಹೆಯಾನ ೧೩.೮೭ ಕೋಟಿ ನಗದನ್ನು ಮದ್ಯವರ್ತಿಗಳಿಲ್ಲದೇ ನೇರವಾಗಿ ಖಾತೆ ಜಮಾಯಿಸಿ ಶೇ. ೯೮.೪೭ರಷ್ಟು ಪ್ರಗತಿ ಸಾಧಿಸಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್ ತಿಳಿಸಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಅವರು ಮಾತನಾಡಿದರು.
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಗೃಹಲಕ್ಷಿö್ಮÃ ಯೋಜನೆ ಜಾರಿಗೊಳಿಸಿದೆ. ಕುಟುಂಬದ ನಿರ್ವಹಣೆಯ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು ಆ ನಿಟ್ಟಿನಲ್ಲಿ ಪ್ರತಿ ತಿಂಗಳು ಎರಡು ಸಾವಿರದಂತೆ ೨೦೨೩-೨೪ನೇ ಸಾಲಿನವರೆಗೆ ೨೪೦ ಕೋಟಿ ಹಣವನ್ನು ಯಜಮಾನಿ ಖಾತೆಗೆ ಜಮಾಯಿಸಲಾಗಿದೆ ಎಂದರು.
ಗೃಹಜ್ಯೋತಿ ಯೋಜನೆಯಡಿ ತಾಲೂಕಿನಲ್ಲಿ ೩೮,೭೨೯ ಗ್ರಾಹಕರು ನೊಂದಾವಣೆಯಾಗಿದೆ. ಈ ಪೈಕಿ ೨೪,೮೦೩ ಶೂನ್ಯ ಬಿಲ್ ಪಡೆದಿರುವ ಫಲಾನುಭವಿಗಳ ಗ್ರಾಹಕರಿಗೆ ಸರ್ಕಾರ ಒಟ್ಟು ೧೨ ಕೋಟಿ ಹಣವನ್ನು ಮೆಸ್ಕಾಂಗೆ ಭರಿಸಿದ್ದು, ೨೦೦ ಯುನಿಟ್ ಒಳಗೆ ಬಳಸುತ್ತಿರುವ ಸಾರ್ವಜನಿಕರಿಗೆ ಉಚಿತ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೇಳಿದರು.
ಶಕ್ತಿ ಯೋಜನೆಯಲ್ಲಿ ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ವಿಭಾಗದಿಂದ ಒಟ್ಟು ಆರಂಭದಿAದ ೬೭.೨೨ ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ಸಾರಿಗೆ ಇಲಾಖೆಗೆ ಸರ್ಕಾರವು ೧೯.೪೯ ಕೋಟಿ ನಗದನ್ನು ಭರಿಸಿದೆ. ಇದರಿಂದ ಹಲವಾರು ಮಹಿಳೆಯರು ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಯಾಣ ಬೆಳೆಸಿ ಯೋಜನೆ ಸದುಪಯೋಗಪಡಿಸಿಕೊಂಡಿದ್ದಾರೆ ಎಂದರು.
ಹಸಿವು ಮುಕ್ತ ಭಾರತ ನಿರ್ಮಾಣದಡಿ ರಾಜ್ಯಸರ್ಕಾರ ಅನ್ಯಭಾಗ್ಯ ಯೋಜನೆ ಜಾರಿಗೆ ತಂದಿದೆ. ಈ ಪೈಕಿ ತಾಲೂಕಿನಲ್ಲಿ ಆರಂಭದಿAದ ೪೫,೭೫೪ ಕಾರ್ಡ್ದಾರರಿಗೆ ಒಟ್ಟು ೬೧.೧೬ ಕೋಟಿ ನಗದನ್ನು ನೇರ ಖಾತೆಗೆ ಜಮಾಯಿಸಿದೆ. ಜನವರಿ ಮಾಹೆಯಿಂದ ನಗದು ಬದಲಾಗಿ ಪೂರ್ಣಪ್ರಮಾಣದ ಅಕ್ಕಿ ವಿತರಿಸುವ ಮೂಲಕ ರಾಜ್ಯಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಹೇಳಿದರು.
ನಿರುದ್ಯೋಗ ಪದವಿ ಹಾಗೂ ಡಿಪ್ಲಮಾ ಮಾಡಿರುವ ಯುವಕರಿಗೆ ಜೀವನ ಸುಧಾರಣೆಗಾಗಿ ಯುವನಿಧಿ ಯೋಜನೆಯಡಿ ತಾಲೂಕಿನಲ್ಲಿ ೮ ಮಂದಿ ಸೌಲಭ್ಯ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕರು ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ನೋಂದಾಯಿಸಿ ಮಾಸಾಶನ ಪಡೆದುಕೊಂಡು ಆರ್ಥಿಕವಾಗಿ ಸದೃಢವಾಗಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಮುಖ್ಯನಿರ್ವಹಣಾಧಿಕಾರಿ ವಿಜಯ್‌ಕುಮಾರ್ ಮಾತನಾಡಿ, ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷö್ಯ ವಹಿಸಬಾರದು. ಸಣ್ಣಪುಟ್ಟ ಲೋಪದೋಷಗಳು ಕಂಡುಬAದಲ್ಲಿ ಆಯಾಯ ಇಲಾಖೆಗಳು ಮಾಸಿಕ ಸಭೆಗಳಲ್ಲಿ ಚರ್ಚಿಸಿ ಪರಿಹರಿಸುವ ಕಾರ್ಯ ಮಾಡಿದಾಗ ಯೋಜನೆಗಳು ಸಫಲತೆ ಕಾಣಲಿದೆ ಎಂದು ಹೇಳಿದರು.
ಪ್ರಾಧಿಕಾರದ ಸಮಿತಿ ಸದಸ್ಯರಾದ ಗೌಸ್ ಮೊಹಿದ್ಧೀನ್ ಮಾತನಾಡಿ, ಸರ್ಕಾರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಬೇಸಿಗೆ ಕಾಲದ ಕಾರಣ ಹೆಚ್ಚು ಆದ್ಯತೆ ಕುಡಿಯುವ ನೀರಿಗೆ ಕೊಡಬೇಕು. ಕೆಎಸ್‌ಆರ್‌ಟಿಸಿ ಅಧಿಕಾರಿ ಉತ್ತರಿಸಿ ಸದ್ಯದಲ್ಲೇ ೩೦೦ ಲೀಟರ್‌ಗೆ ಟೆಂಡರ್ ಕರೆಯಲಾಗಿದ್ದು ಸಧ್ಯದಲ್ಲೇ ನೀರಿನ ಟ್ಯಾಂಕ್ ಅಳವಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರೇಷ್ಮಾ, ಪ್ರಾಧಿಕಾರದ ಉಪಾಧ್ಯಕ್ಷ ಉಪ್ಪಳ್ಳಿ ಅನ್ಸರ್‌ಆಲಿ, ಸದಸ್ಯರಾದ ನಾಗೇಶ್‌ರಾಜ್ ಅರಸ್, ಪುನೀತ್, ಎಲ್.ಎಂ.ನಾಗರಾಜು, ನರೇಂದ್ರ, ಹಸೈನಾರ್ ಆಲಿ, ರೋಹಿತ್, ವಿದ್ಯಾ, ಜಯಂತಿ, ಧರ್ಮಯ್ಯ, ತಿಮ್ಮೇಗೌಡ, ಕೃಷ್ಣ ಉಪಸ್ಥಿತರಿದ್ದರು.