ಸಿದ್ದರಾಮಯ್ಯ ಹೇಳಿಕೆಗೆ ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ತಿರುಗೇಟು
ತುರುವೇಕೆರೆ: ಕಾಶ್ಮೀರದಲ್ಲಿನ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಮೇಲೆ ಭಾರತ ಸಿಂಧೂರ ಆಫರೇಷನ್ ಯಶಸ್ವಿಯಾಗಿದೆ. ಈ ಕ್ರೆಡಿಟ್ ಅನ್ನು ಪ್ರಧಾನಿಗೆ ನೀಡದೆ ಸೈನಿಕರಿಗೆ ನೀಡಬೇಕು ಎನ್ನುವ ಮುಖ್ಯಮಂತ್ರಿಗಳ ನಿಲುವು ಖಂಡನೀಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯುದ್ಧದ ಮೂಲಕ ಭಾರತ&ಪಾಕಿಸ್ತಾನದ ತಪ್ಪನ್ನು ಮನವರಿಕೆ ಮಾಡಿಕೊಟ್ಟಿದೆ. ಜತೆಗೆ ಪಾಕಿಸ್ತಾನದ ಪ್ರಧಾನಿ ಯುದ್ಧ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿದರಿಂದ ಪ್ರಧಾನಿ ನರೇಂದ್ರ ಮೋದಿ ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ ಮಾಡಿದ್ದರೂ ಸಂಪೂರ್ಣವಾಗಿ ಯುದ್ಧ ನಿಂತಿಲ್ಲ. ಭಾರತೀಯ ಸೈನಿಕರು ಉಗ್ರರನ್ನು ಹುಡುಕಿ ಸದೆಬಡಿಯುತ್ತಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಂಧೂರ ಆಫರೇಷನ್ ಗೆಲುವಿನ ಕ್ರೆಡಿಟ್ ಅನ್ನು ಯಾರಿಗೂ ನೀಡದೆ ಹೋರಾಡಿದ ಸೈನಿಕರಿಗೆ ನೀಡಬೇಕು ಎನ್ನುತ್ತಾರೆ ಇದನ್ನೂ ಒಪ್ಪೊಣ. ಆದರೆ ಶತ್ರುಗಳೊಂದಿಗೆ ಯುದ್ಧ ನಡೆಸುವ ಮಹತ್ವದ ತೀಮಾರ್ನ ತೆಗೆದುಕೊಳ್ಳುವುದು ಪ್ರಧಾನ ನರೇಂದ್ರ ಮೋದಿ ಮತ್ತು ಅವರ ಸಂಸತ್ ಸದಸ್ಯರು. ಇವರಿಗೆ ಈ ಯುದ್ಧದ ಗೆಲುವಿನ ಕ್ರೆಡಿಟ್ ಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಕೇಂದ್ರ ಸರ್ಕಾರದ ಏಳಿಗೆ ಸಹಿಸದೆ ವಿಷಕಾರುತ್ತಿದ್ದಾರೆಂದು ದೂರಿದರು. ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರತಿದಿನ ಈ ಬಗ್ಗೆ ಜಾಹೀರಾತು ಕೂಡ ನೀಡುತ್ತಿದ್ದಾರೆ. ರಾಜ್ಯದ ತೆರಿಗೆದಾರರ ಹಣದಿಂದಲೇ ಈ ಯೋಜನೆಗಳು ನಡೆಯುತ್ತಿವೆ ಹೊರೆತು ಮುಖ್ಯಮಂತ್ರಿಗಳ ಹಣದಿಂದಾಗಲಿ ಅಥವಾ ಕಾಂಗ್ರೆಸ್ ಹಣದಿಂದ ನಡೆಯುತ್ತಿಲ್ಲ. ಹೀಗಿರುವಾಗ ಗ್ಯಾರಂಟಿಗಳ ಯಶಸ್ಸಿನ ಕೊಡುಗೆಯನ್ನು ರಾಜ್ಯದ ತೆರಿಗೆದಾರರಿಗೆ ನೀಡಬೇಕೆ ವಿನ@ ಸಿದ್ದರಾಮಯ್ಯ ಅವರಿಗಲ್ಲವೆಂದು ಪ್ರಶ್ನಿಸಿದರು?.
ಇಂತಹ ಅಪಪ್ರಚಾರಗಳನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು, ಈ ಸರ್ಕಾರ ಶಾಸಕರಿಗೆ ಅನುದಾನ ನೀಡದ ಕಾರಣ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಿದ್ದರಾಮಯ್ಯ ಅವರ ಚರ್ಮ ದಪ್ಪವಾಗಿದೆ. ಏನೇ ಹೇಳಿದರೂ ಅರ್ಥವಾಗೋದಿಲ್ಲ.
ಜನರ ತೆರಿಗೆಯನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುವ ಮೂಲಕ ಹಣ ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಟ್ಟಣದ ಪಿಎಲ್ಡಿ ಬ್ಯಾಂಕ್ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಸದಸ್ಯರಿಗೆ ಸ್ಪಷ್ಟ ಕಾರಣ ನೀಡದೇ ಸುಮಾರು 8200 ಮತದಾರರುಗಳನ್ನು ವಜಾ ಮಾಡಿದ್ದು, ಇದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಡಿಸ್ಟಿಕ್ ರಿಜಿಸ್ಟಾರ್ ಆಫ್ ಕೋ ಆಫರೇಟೀವ್ ಸೊಸೈಟಿ ಅಧಿಕಾರಿಗಳಿಗೆ ಪತ್ರ ಬರೆದು, ಸಮಗ್ರ ತನಿಖೆ ಮಾಡಿ ವಜಾ ಆಗಿರುವ ಮತದಾರರಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸುವುದಾಗಿ ಹೇಳಿದರು. ಮುಖಂಡರಾದ ಮಂಗಿಕುಪ್ಪೆ ಬಸವರಾಜು, ರಾಮಡಿಹಳ್ಳಿ ದೇವರಾಜು ಇದ್ದರು.
ಜನರಿಗೆ ತಲಾ 250 ರೂ.: ಮೇ 20ರಂದು ಹೊಸಪೇಟೆಯಲ್ಲಿ ನಡೆಯುವ ಸಮರ್ಪಣೆ ಸಂಕಲ್ಪ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ಗಳನ್ನು ಸರ್ಕಾರ ಹಿಡಿತಕ್ಕೆ ತೆಗೆದುಕೊಂಡು ಸರ್ಕಾರದ ಹಣದಲ್ಲಿ ಜನರಿಗೆ ತಲಾ 250 ರೂಪಾಯಿ ಕೊಟ್ಟು ಕರೆದುಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆಂದು ಕೃಷ್ಣಪ್ಪ ಲೇವಡಿ ಮಾಡಿದರು.