ಗೌರಿಬಿದನೂರಿನಲ್ಲಿ ಮುಂದುವರಿದ ಪಕ್ಷಾಂತರ ಪರ್ವ, ಪುಟ್ಟಸ್ವಾಮಿ ಗೌಡ ಬಣಕ್ಕೆ ಕೈ ಮುಖಂಡರು

30_GBD_Political_01A
Published on

ಗೌರಿಬಿದನೂರು: ತಾಲೂಕಿನಲ್ಲಿ ಪಕ್ಷಾಂತರ ಪರ್ವ ಮುಂದುವರಿದಿದ್ದು, ಗಂಗಸಂದ್ರ ಗ್ರಾಮ ಪಂಚಾಯಿತಿಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ನರಸಿಂಹಮೂರ್ತಿ ನೇತೃತ್ವದಲ್ಲಿ ಗುರುವಾರ ಪುಟ್ಟಸ್ವಾಮಿಗೌಡ ಬಣಕ್ಕೆ ಸೇರ್ಪಡೆಯಾದರು.

ಹಾಲಿ ಶಾಸಕರು ನಮ್ಮನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಸಿಕೊಳ್ಳುತ್ತಾರೆ, ಬಳಿಕ ನಿರ್ಲಕ್ಷ್ಯ ಮಾಡುತ್ತಾರೆ. ತಾಲೂಕಿನಲ್ಲಿ ದಶಕಗಳಿಂದ ನಡೆಯುತ್ತಿರುವ ರಾಜಕೀಯ ಶೋಷಣೆ, ಸಾಮಾಜಿಕ ಅನ್ಯಾಯ, ದಲಿತ ಹಿಂದುಳಿದವರ ಕಡೆಗಣನೆಯಿಂದ ಬೇಸತ್ತು ಪಕ್ಷ ತೊರೆಯುತ್ತಿದ್ದೇವೆ, ಸಮಾನತೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಜಿಪಂ ಸದಸ್ಯ ಡಿ.ನರಸಿಂಹಮೂರ್ತಿ ವಿಶ್ವಾಸ ವ್ಯಕ್ತಪಡಿಸಿದರು.

ನನಗೆ ರಾಜಕೀಯದಲ್ಲಿ ಆಸಕ್ತಿ ಇರಲಿಲ್ಲ. ಆದರೆ ತಾಲೂಕಿನ ರಾಜಕೀಯ ಪರಿಸ್ಥಿತಿ ಹಾಗೂ ಜನರ ಆಶಯದಂತೆ ರಾಜಕೀಯಕ್ಕೆ ಬಂದಿದ್ದೇನೆ. ಜನರ ಒತ್ತಾಯದ ಮೇರೆಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ.

ಗೌರಿಬಿದನೂರು ಬೆಂಗಳೂರಿಗೆ ಸಮೀಪವಿದ್ದರೂ ಅಭಿವೃದ್ಧಿಯಲ್ಲಿ ಕಡೆಗಣಿಸಲ್ಪಟ್ಟಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕ್ಷೇತ್ರದ ಅಭಿವೃದ್ಧಿಯ ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತೇವೆ ಎಂದು ಉದ್ಯಮಿ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.

ಮುಖಂಡರಾದ ಎಸ್.ಶ್ರೀನಿವಾಸರೆಡ್ಡಿ, ಜೆ. ಕೃಷ್ಣಾರೆಡ್ಡಿ, ಬಿ.ಶಿವಕುಮಾರ್, ಕೆ.ರವಿ, ಜಿ.ನರಸಿಂಹಯ್ಯ, ಅಶ್ವತ್ಥರೆಡ್ಡಿ ಮತ್ತಿತರರು ಪುಟ್ಟಸ್ವಾಮಿಗೌಡ ಬಣಕ್ಕೆ ಸೇರ್ಪಡೆಯಾದರು.

ಮುಖಂಡರಾದ ಅಬ್ದುಲ್ಲಾ, ನಾಗಸಂದ್ರ ಶ್ರೀನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net