ಗೌರಿ ಬಗಲಿಗೆ ಜಪಾನ ಶಿಷ್ಯ ವೇತನ

pixlr
Published on

ವಿಜಯಪುರ: ಜಪಾನನ ವಿದ್ಯಾರ್ಥಿ ವೇತನಕ್ಕೆ ಭಾಜನಳಾದ ಕರ್ನಾಟಕದ ಏಕೈಕ ವಿದ್ಯಾರ್ಥಿನಿ, ಅಖಿಲ ಭಾರತದಾದ್ಯಂತ ನಡೆಯುವ ಲಿಖಿತ ಮತ್ತು ಮೌಖಿಕ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾಳೆ. ಜಪಾನ ದೇಶದ ಪ್ರಧಾನಮಂತ್ರಿಗಳ ಪ್ರತಿಷ್ಠಿತ ಏಷಿಯಾ ಕಾಕೇಹಾಸಿ ಶಿಷ್ಯವೇತನಕ್ಕೆ ವಿಜಯಪುರ ಜಿಲ್ಲೆಯ ಗೌರಿ ಸಂಕೇತ ಬಗಲಿ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಗೌರಿ ಸದ್ಯಕ್ಕೆ ಕೊಲ್ಲಾಪುರದ ಸಂಜಯ ಘೋಡಾವತ್ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಈ ಶಿಷ್ಯವೇತನಕ್ಕಾಗಿ ಭಾರತದಾದ್ಯಂತ ಲಿಖಿತ ಹಾಗೂ ಮೌಖಿಕವಾಗಿ ಪರೀಕ್ಷೆ ನಡೆಸಿದ್ದು , ಆಯ್ಕೆಯಾಗಿರುವ 21 ವಿದ್ಯಾರ್ಥಿಗಳ ಪೈಕಿ ಗೌರಿ ಬಗಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಈಕೆ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಜಪಾನ ಪ್ರಧಾನಿಯಿಂದ ಸ್ಕಾಲರ್ ಶಿಪ್ ಪಡೆಯಲಿದ್ದಾಳೆ ವಿಜಯಪುರದ ಈ ಕುವರಿ. ಜಪಾನ ವಿದ್ಯಾರ್ಥಿ ವೇತನಕ್ಕೆ ಭಾಜನರಾದ ಗೌರಿ ಸಂಕೇತ ಬಗಲಿ, ಜಪಾನಿನ ಪ್ರಧಾನಿಯವರಿಂದ ಘೋಷಿತ, ಏಷ್ಯಾ ದೇಶದ ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ಕೊಡಮಾಡುವ ಒಂದು ವರ್ಷದ ಶಿಷ್ಯವೇತನ ಸಹಿತ ಶಿಕ್ಷಣವನ್ನು ಪಡೆಯಲು ಕುಮಾರಿ ಗೌರಿ ಸಂಕೇತ ಬಗಲಿ ಅರ್ಹರಾಗಿದ್ದಾರೆ. ಈ ಮೂಲಕ ವಿಜಯಪುರದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಕುಮಾರಿ ಗೌರಿ, ಸಂಕೇತ್ ಮತ್ತು ಜಯಲಕ್ಷ್ಮಿ ಬಗಲಿ ಅವರ ಸುಪುತ್ರಿಯಾಗಿದ್ದು, ಇಂಡಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಹಾಗೂ ಡಾ. ಸತೀಶ ಜಿಗಜಿನ್ನಿ ಯವರ ಮೊಮ್ಮಗಳಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net