

ಯಾದಗಿರಿ: ಗೌರಿ-ಗಣೇಶ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು. ನಗರದ ಡಿಸಿ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸೆ.7ರಿಂದ ಆರಂಭವಾಗುವ ಗೌರಿ-ಗಣೇಶ ಹಬ್ಬನ್ನು ಶಾಂತಿ ಮತ್ತು ಸುವ್ಯವಸ್ಥೆಯಿಂದ ಆಚರಣೆ ಮಾಡಬೇಕು ಎಂದರು.
ಪಿಒಪಿ ಹಾಗೂ ರಾಸಾಯನಿಕ ಮಿಶ್ರೀತ ಮೂರ್ತಿ ಪ್ರತಿಷ್ಠಾಪಿಸದೆ ಪರಿಸರ ಸ್ನೇಹಿ ಮೂರ್ತಿಗಳನ್ನು ಮಾತ್ರ ಸ್ಥಾಪಿಸುವುದರ ಜತೆಗೆ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದರು.
ಈ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಸಂಭ್ರಮದಿAದ ಆಚರಿಸಬೇಕು ಎಂದು ವಿವಿಧ ಸಮಿತಿ ಮತ್ತು ಸಂಘ -ಸಂಸ್ಥೆಗಳ ಪ್ರತಿನಿಧಿಗಳಿಗೆ ಮನವಿ ಮಾಡಿದರು. ಡಿಜೆ ಧ್ವನಿವರ್ಧಕವನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದರು.
ಹಬ್ಬದ ವೇಳೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಹಿರಿಯರಿಗೆ, ಮಕ್ಕಳಿಗೆ ಮತ್ತು ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಆಯಾ ಮಂಡಳಿ ಪ್ರಮುಖರು ಎಚ್ಚರ ವಹಿಸಬೇಕು. ಅಲ್ಲದೆ ಜಿ¯್ಲÁಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಹೇಳಿದರು.
ಜಿ¯್ಲೆಯಲ್ಲಿ ಸಾರ್ವಜನಿಕರು ಗಣೇಶನ ಮೂರ್ತಿ ರಸ್ತೆಯಲ್ಲಿ ಕೂಡಿಸಿ, ಇತರರಿಗೆ ತೊಂದರೆ ಉಂಟು ಮಾಡಬಾರದು. ಸಣ್ಣ-ಪುಟ್ಟ ಗಣೇಶನ ಮೂರ್ತಿ ಹೊರತು ಪಡಿಸಿ, ಉಳಿದಂತೆ ಎಲ್ಲರೂ ತಪ್ಪದೇ ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.
ಪರವಾನಿಗೆ ಕುರಿತು ಏಕಗವಾಕ್ಷಿ ವ್ಯವಸ್ಥೆಯನ್ನು ಯಾದಗಿರಿ ನಗರ ಪೊಲೀಸ್ ಠಾಣೆ ಮತ್ತು ಆಯಾ ತಾಲೂಕು ಕೇಂದ್ರಗಳು ಮತ್ತು ಗ್ರಾಮಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಪರವಾನಿಗೆ ನೀಡುವ ನೀಡಲು ಸಂಬAಧಿಸಿದ ಅಧಿಕಾರಿಗಳೀಗೆ ಸೂಚನೆ ನೀಡಿದರು. ಗಣೇಶ ಪ್ರತಿಷ್ಠಾಪಿಸುವ ಪ್ರತಿಯೊಂದು ಸ್ಥಳದಲ್ಲಿ 10 ಜನ ಸ್ವಯಂ ಸೇವಕರನ್ನು ನೇಮಕ ಮಾಡಿ ಹಾಗೂ ಕಮಿಟಿಯಲ್ಲಿ ಸದಸ್ಯರ ಕುರಿತಾದ ವರದಿ ಸಂಬAಧಿಸಿದ ತಾಲೂಕಿನ ತಹಸೀಲ್ದಾರರಿಗೆ ಹಾಗೂ ಪೊಲೀಸ್ ಇಲಾಖೆಗೆ ನೀಡಬೇಕು.
ನಗರದ ಪ್ರತಿಯೊಂದು ಗಣೇಶ ಪ್ರತಿಷ್ಠಾಪನಾ ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಹೋಮ್‌ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಗಣೇಶ ವಿಸರ್ಜನಾ ಹೊಂಡದ ಬಳಿ ಪರಿಣಿತ ಈಜುಗಾರರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಇರುವಂತೆ ಮುನ್ನಚ್ಚರಿಕೆ ವಹಿಸಬೇಕೆಂದು ನಿರ್ದೇಶನ ನೀಡಿದರು.
ಉಪ ಅರಣ್ಯ ಸಂರP್ಷÀಣಾಧಿಕಾರಿ ಕಾಜೋಲï ಪಾಟೀಲ್, ಅಪರ್ ಡಿಸಿ ಶರಣಬಸಪ್ಪ ಕೋಟೆಪ್ಪಗೊಳ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ್, ಅಧಿಕಾರಿಗಳಾದ ವಿಜಯಕುಮಾರ ಮಡ್ಡೆ, ಹಂಪಣ್ಣ ಸಜ್ಜನ್, ಲಕ್ಷಿö್ಮÃಕಾಂತ್, ಸುನಿಲï ಮೂಲಿಮನಿ, ಕಸಾಪ ಜಿ¯್ಲÁಧ್ಯP್ಷÀ ಸಿದ್ದಪ್ಪ ಹೊಟ್ಟಿ, ಮುಖಂಡರಾದ ಅಯ್ಯಣ್ಣ ಹುಂಡೇಕಾರ್, ಚನ್ನಪ್ಪಗೌಡ ಮೋಸಂಬಿ, ವಿಶ್ವನಾಥ ಸಿರವಾರ, ಬಾಬು ದೋಖಾ, ಮರೆಪ್ಪ ಇತರರಿದ್ದರು.
ಮುಳ್ಳುಕಂಟಿ ತೆರವುಗೊಳಿಸಿ: ನಗರದ ದೊಡ್ಡಕೆರೆಯಲ್ಲಿ ಕಡ್ಡಾಯವಾಗಿ ಗಣೇಶ ವಿಸರ್ಜನೆ ಮಾಡಬೇಕು. ಇದಕ್ಕಾಗಿ ಪಕ್ಕದ ಸಣ್ಣಕೆರೆ ಸುತ್ತಲು ಇರುವ ಮುಳ್ಳುಕಂಠಿ ತೆರವುಗೊಳಿಸುವುದರ ಜತೆಗೆ ರಸ್ತೆ ದುರಸ್ತಿ ಮಾಡಿಕೊಡಬೇಕು ಎಂದು ನಗರಸಭೆ ಪೌರಾಯುಕ್ತರಿಗೆ ಸೂಚಿಸಿದರು.
ಭೀಮಾ-ಕೃಷ್ಣಾದಲ್ಲಿಲ್ಲ ವಿಸರ್ಜನೆ: ಗಣೇಶ ಮೂರ್ತಿಗಳ ವಿಸರ್ಜನೆ ಯಾವುದೇ ಕಾರಣಕ್ಕೂ ಭೀಮಾ ಮತ್ತು ಕೃಷ್ಣಾ ನದಿಯಲ್ಲಿ ವಿಸರ್ಜಿಸುವಂತಿಲ್ಲ. ಅಲ್ಲದೆ ಗಣೇಶ ವಿಸರ್ಜನೆ ವೇಳೆ ನಿರಂತರ ವಿದ್ಯುತ್ ಪೂರೈಸಬೇಕು. ಆ ದಿನಗಳಂದು ಸಂಚಾರ ವ್ಯವಸ್ಥೆಗೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳಬೇಕೆಂದು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.