ಗೌರವಿಸುವ ಕೆಲಸವಾಗಲಿ

26Rajesh10
Published on

ಚಾಮರಾಜನಗರ: ಸಂವಿಧಾನವನ್ನು ಎಲ್ಲರೂ ಗೌರವಿಸುವುದರೊಂದಿಗೆ ಪಾಲಿಸಬೇಕು ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆ್ ಇಂಡಿಯಾ ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್‌ಉಲ್ಲಾ ಹೇಳಿದರು.

ನಗರದ ಎಸ್‌ಡಿಪಿಐ ಪಕ್ಷದ ಕಚೇರಿ ಮುಂಭಾಗ ಭಾನುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಮ್ಮ ಸಂವಿಧಾನ ರಷ್ಯಾ, ಬ್ರಿಟನ್, ಅಮೆರಿಕ ಸೇರಿದಂತೆ ಇತರ ದೇಶಗಳ ಸಂವಿಧಾನ ಅಂಶಗಳನ್ನು ಹೊಂದಿರುವ ಬೃಹತ್ ಸಂವಿಧಾನವಾಗಿದೆ ಎಂದರು. ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸಿ.ಕೆ.ನಯಾಜ್ ಉಲ್ಲಾ, ತಮಿಳು ಸಂಘದ ಜಿಲ್ಲಾಧ್ಯಕ್ಷ ಜಗದೀಶನ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮಹೇಶ್, ಸಂಘಟನಾ ಕಾರ್ಯದರ್ಶಿ ನಸ್ರುಲ್ಲಾ ಖಾನ್, ಕಾರ್ಯದರ್ಶಿ ಜಬೀನೂರ್, ಜಿಲ್ಲಾ ಸಮಿತಿಯ ಸದಸ್ಯರಾದ ಸಿ.ಎಸ್. ಸೈಯದ್ ಆರೀಫ್, ಮೊಹಮ್ಮದ್ ಉಮ್ಮರ್, ಟೌನ್ ಕಾರ್ಯದರ್ಶಿ ಮೊಹಮ್ಮದ್ ತೌಸೀಫ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net