

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಕರ್ನಾಟಕ ವಾಣಿಜ್ಯೋದ್ಯಮಿ ಸಂಸ್ಥೆ, ಡಾ.ಡಿ.ಎಸ್. ರ್ಕ ಸಾಹಿತ್ಯ ವೇದಿಕೆ, ಸಾಹಿತ್ಯ ಪ್ರಕಾಶನ ಸಹಯೋಗದಲ್ಲಿ ಹುಬ್ಬಳ್ಳಿ ಸಾಹಿತ್ಯ ಭಂಡಾರದ ಕೀರ್ತಿಶೇಷ ಮ. ಅನಂತಮೂರ್ತಿ ಅವರ 24ನೇ ಪುಣ್ಯತಿಥಿ, ಗೌರವಾರ್ಪಣೆ, ಪುಸ್ತಕಗಳ ಬಿಡುಗಡೆ-ಚಿಂತನೆ ಕಾರ್ಯಕ್ರಮವು ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಸೆ. 18ರಂದು ಸಂಜೆ 5.30ಕ್ಕೆ ಏರ್ಪಡಿಸಲಾಗಿದೆ ಎಂದು ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಾಸ ಪ್ರಕಾಶನದ ಮುಖ್ಯಸ್ಥ, ಲೇಖಕ, ವಾಗ್ಮಿ ಗುರುರಾಜ ಕರ್ಜಗಿ ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಹೊಸಮನಿ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಹಿರಿಯ ಪತ್ರಕರ್ತ ಡಾ. ಈಶ್ವರ ದೈತೋಟ, ಡಾ. ರಾಜನ್ ದೇಶಪಾಂಡೆ, ಸುದರ್ಶನ ಮೊಗಸಾಲೆ, ಮಧುಕರ ಯಕ್ಕುಂಡಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು. ಡಾ. ನಾ. ಮೊಗಸಾಲೆ ಅವರು ವಿಶೇಷವಾಗಿ ಉಪಸ್ಥಿತರಿರುವರು. ಡಾ.ಜಿ.ಎಂ. ಹೆಗಡೆ ನಿರೂಪಿಸುವರು ಎಂದರು.
ಇದೇ ವೇಳೆ ವೈರಸ್ (ಕಾದಂಬರಿ), ಪ್ರಕೃತಿ-ಸಂಸ್ಕೃತಿ-ಕೂಕಿಲು, ನಾಲ್ಕನೆಯ ತಲೆಮಾರಿನ ಸಮರ, ಯಾದವೀ ಕಲಹಗಳ ಕುದಿಯುವ ಹಂಡೆ, ಕುಮಾರವ್ಯಾಸನ ನುಡಿಮುತ್ತುಗಳು, ಆರೋಗ್ಯ: ಸುಖ-ಸಂತೋಷಕ್ಕೆ ಅಡಿಪಾಯ, ವಚನಗಳಲ್ಲಿ ದೇಹ-ಮನಸ್ಸು, ಬಾಳೊಂದು ವಿಸ್ಮಯ ಕೃತಿಗಳು ಬಿಡುಗಡೆಯಾಗಲಿವೆ ಎಂದರು.
ಡಾ.ಡಿ.ಎಸ್. ಸಾಹಿತ್ಯ ವೇದಿಕೆಯ ಡಾ.ಬಿ.ಎಸ್. ಮಾಳವಾಡ, ವೀರಣ್ಣ ಹೂಲಿ, ಏಕನಾಥ ಕಲಬುರ್ಗಿ ಸುದ್ದಿಗೋಷ್ಠಿಯಲ್ಲಿದ್ದರು.