ಗೌರವಧನ ಬಿಡುಗಡೆಗೆ ಆಗ್ರಹ

3MDG1 AKSHARA DASOHA
Published on

ಮುಂಡರಗಿ: ಅಕ್ಷರ ದಾಸೋಹ ಬಿಸಿಯೂಟ ತಯಾರಕರಿಗೆ ಜೂನ್, ಜುಲೈ ಗೌರವಧನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಘಟಕದಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಬಿಸಿಯೂಟ ತಯಾರಕರಲ್ಲಿ ಮುಖ್ಯ ಅಡುಗೆಯವರಿಗೆ 2,700 ರೂಪಾಯಿ, ಸಹಾಯಕ ಅಡುಗೆಯವರಿಗೆ 2,600 ರೂಪಾಯಿ ಗೌರವ ಸಂಭಾವನೆ ನೀಡಲಾಗುತ್ತಿದೆ. ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಇಷ್ಟು ಹಣದಲ್ಲಿ ಜೀವನ ನಿರ್ವಹಣೆ ಕಷ್ಟವಾಗಿದೆ. ವೇತನ ಹೆಚ್ಚಿಸಿ ಜೂನ್, ಜುಲೈ ಗೌರವಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಬಿಸಿಯೂಟ ತಯಾರಕರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಲಾಕ್​ಡೌನ್ ಪರಿಹಾರವಾಗಿ 5 ಸಾವಿರ ರೂಪಾಯಿ ನೀಡಬೇಕು. ಪ್ರತಿ ಶಾಲೆಯಲ್ಲಿ ಅಡುಗೆ ತಯಾರಿಸಲು ಇಬ್ಬರು ಕಡ್ಡಾಯವಾಗಿರುವಂತೆ ನಿಯಮ ರೂಪಿಸಬೇಕು. ಬಿಸಿಯೂಟ ತಯಾರಿಕೆಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸುವ ನಿರ್ಧಾರ ಕೈಬಿಡಬೇಕು. ಕೆಲಸ ಕಾಯಂಗೊಳಿಸಿ ಶಾಸನಾತ್ಮಕ ಸವಲತ್ತುಗಳನ್ನು ನೀಡುವುದು ಸೇರಿ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಗ್ರೇಡ್-2 ತಹಸೀಲ್ದಾರ್ ಕೆ. ರಾಧಾ ಮನವಿ ಸ್ವೀಕರಿಸಿದರು. ಗೌರವಾಧ್ಯಕ್ಷ ಬಿ. ಬಾಬು, ತಾಲೂಕಾಧ್ಯಕ್ಷೆ ಶಾಂತಾ ನಾಯಕ, ದ್ಯಾಮಣ್ಣ ಮಡಿವಾಳರ, ಎಂ.ಎಚ್. ತಳವಾರ, ಕಾತುಂಬೀ ಕಿಲೇದಾರ, ಅಕ್ಕಮ್ಮ ಕಾತರಕಿ, ಇಮಾಂಬೀ ನದಾಫ್, ಲಕ್ಷ್ಮ್ವ ರಂಗಣ್ಣವರ, ಅನ್ನಕ್ಕ ಪೂಜಾರ, ಮಂಜಕ್ಕ ಮಡಿವಾಳರ, ನಿರ್ಮಲಾ ಬಳಿಗಾರ, ಶಂಕ್ರವ್ವ ಮಡ್ಡಿ, ಯಲ್ಲಮ್ಮ ಕ್ಯಾದಗಿಹಳ್ಳಿ, ಗಂಗಮ್ಮ ಪೂಜಾರ, ಅನ್ನಪೂರ್ಣರ್ಾ ನವಲಿ, ಕಾವೇರಿ ವಾಲಿಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net