ಗೌಡ್ತಿಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ವಿಜೇತರು

1 ckm 8
ಚಿಕ್ಕಮಗಳೂರಿನಲ್ಲಿ ನಡೆದ ಗೌಡ್ತಿಯರ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ವರಾಹಿ ಮೂಡಿಗೆರೆ ಲೆಜೆಂಡ್ ತಂಡ.
Published on

ಚಿಕ್ಕಮಗಳೂರು: ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮತ್ತು ಗುಣನಾಥ ಸ್ವಾಮೀಜಿ ಅವರ ಆಶೀರ್ವಾದದೊಂದಿಗೆ ಇಲ್ಲಿನ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಚಿಕ್ಕಮಗಳೂರು ಗೌಡ್ತಿಯರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ೮ ತಂಡಗಳು ಭಾಗವಹಿಸಿದ್ದು, ಮೂಡಿಗೆರೆಯ ವರಾಹಿ ಮೂಡಿಗೆರೆ ಲೆಜೆಂಡ್ ತಂಡ ಪ್ರಥಮ ಸ್ಥಾನ ಗಳಿಸಿ ಒಂದು ಲಕ್ಷ ರೂ. ಬಹುಮಾನ ಪಡೆದಿದೆ.

ದ್ವಿತೀಯ ಸ್ಥಾನ ಪಡೆದ ಮೈಸೂರು ಮಹಾರಾಣೀಸ್ ತಂಡ ೭೦ ಸಾವಿರ ನಗದು ಬಹುಮಾನ ಪಡೆದರೆ, ತೃತೀಯ ಸ್ಥಾನ ಪಡೆದ ಮಡಿಕೇರಿಯ ದ ಎಲೈಟ್ ಕ್ರಿಕೆಟ್ ಕ್ಲಬ್ ವುಮೆನ್ಸ್ ತಂಡ ೫೦ ಸಾವಿರ ರೂ. ಹಾಗೂ ಬಾಳೆಹೊನ್ನೂರು ಬೈರವೀಸ್ ತಂಡ ನಾಲ್ಕನೇ ಸ್ಥಾನ ಪಡೆದು ೨೫ ಸಾವಿರ ರೂ. ಬಹುಮಾನ ಪಡೆದಿವೆ.

ರಾಜ್ಯದ ವಿವಿಧ ಭಾಗಗಳಿಂದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಿಕ್ಕಮಗಳೂರು ಟೈಗ್ರಸ್, ಡಿಎಂಎಚ್ ಹಂಟರ್, ಕಾರೇಮನೆ ಥಂರ‍್ಸ್ ಸ್ಟೆçÊರ‍್ಸ್, ವರಾಹಿ ಮೂಡಿಗೆರೆ ಲೆಜೆಂಡ್ಸ್, ಬಾಳೆಹೊನ್ನೂರು ಬೈರವೀಸ್, ಮೈಸೂರು ಮಹಾರಾಣೀಸ್, ದ ಎಲೈಟ್ ಕ್ರಿಕೆಟ್ ಕ್ಲಬ್, ಬೆಂಗಳೂರು ಚುಂಚಾದ್ರಿ ಚಾಲೆಂರ‍್ಸ್ ತಂಡಗಳು ಭಾಗವಹಿಸಿದ್ದವು.

ಡಿ. ೨೯ರಂದು ಕುವೆಂಪು ಜನ್ಮ ದಿನಾಚರಣೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಡಾ.ಜೆ.ಪಿ. ಕೃಷ್ಣೇಗೌಡ, ಎಂ.ಜೆ. ದಿನೇಶ್, ಡಾ. ಶುಭಾವಿಜಯ್, ರಾಗಿಣಿರಾಮೇಗೌಡ, ಭಾರತಿ ಬಿ.ಎಲ್, ಟಿ. ರಾಜಶೇಖರ್, ಸಿ.ಕೆ. ಸುಬ್ರಾಯ, ಸಿ.ಟಿ. ಜಯದೇವ್, ಬಾಲಕೃಷ್ಣ, ಬಿ.ಎಸ್. ಜಯರಾಂ, ಕಲಾವತಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net