

ಚಾಮರಾಜನಗರ: ತಾಲೂಕಿನ ಪುಣಜನೂರು ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೌಡಿಕೆ ಸೋಮಣ್ಣ ಅವಿರೋಧ ಆಯ್ಕೆಯಾದರು.
ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ ತಾಂಡವಮೂರ್ತಿ, ಗೌರಮ್ಮ ಉಮೇದುವಾರಿಕೆ ವಾಪಸ್ ಪಡೆದುಕೊಂಡ ಹಿನ್ನೆಲೆಯಲ್ಲಿ ಕಣದಲ್ಲಿ ಉಳಿದಿದ್ದ ಗೌಡಿಕೆ ಸೋಮಣ್ಣ ಅವಿರೋಧ ಆಯ್ಕೆಯಾದರು. ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ನಿರ್ದೇಶಕ ಗಿರೀಶ್ ಪುಣಜನೂರು , ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಮೂರ್ತಿ, ಸದಸ್ಯ ಚಂದ್ರಶೇಖರ್, ಬ್ಯಾಂಕ್‌ನ ಅಧ್ಯಕ್ಷ ಮುತ್ತುನಾಯಕ್, ಗಣೇಶ್ ನಾಯಕ್, ಗುರುನಾಯಕ್, ನಂದೀಶ್ ತಾಂಡವಮೂರ್ತಿ ಇತರರು ಇದ್ದರು.