

ಸೇಡಂ: ತಾಲೂಕಿನ ಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಪಂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಸೆಲ್ಕೋ ಸೋಲಾರ್ ಲೈಟ್ ಲಿಮಿಟೆಡ್ ಸಂಸ್ಥೆಯ ಸಹಬಾಗಿತ್ವದಲ್ಲಿ ಸುಮಾರು 1.7ಲಕ್ಷದ ಸ್ಮಾರ್ಟ್ ಕ್ಲಾಸ್ ಸಲಕರಣೆ ಕೊಡುಗೆಯಾಗಿ ನೀಡಲಾಗಿದೆ.
ಸ್ಮಾರ್ಟ್ ಕ್ಲಾಸ್‌ಗೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಮಂಜುನಾಥ, ಗ್ರಾಮದ ಮುಖಂಡರಾದ ಚಿರಂಜೀವಿರೆಡ್ಡಿ ಮಾಲಿಪಾಟೀಲ್ ಅವರು ಶಾಲೆಯ ಮಕ್ಕಳ ಗುಣಮಟ್ಟ ಹೆಚ್ಚಿಸಲು ಗ್ರಾಪಂ ವತಿಯಿಂದ ಸುಮಾರು ತೊಂಬತ್ತು ಸಾವಿರ ರೂಪಾಯಿಗಳು ಪಾವತಿಸಿ ಸ್ಮಾರ್ಟ್ ಕ್ಲಾಸ್ ಬೋಧನಾ ವ್ಯವಸ್ಥೆಗೆ ಕಾರಣರಾಗಿದ್ದಾರೆ. ಇದಕ್ಕೆ ಪೂರಕವಾಗಿ ಅಭಿವೃದ್ಧಿ ಅಧಿಕಾರಿ ಗೋವಿಂದ ಪಾಟೀಲ್ ಸಹಕರಿಸಿದ್ದು ಸ್ಮರಣಿಯವಾಗಿದೆ ಎಂದರು.
ಮುಖ್ಯಗುರು ಓಂಕಾರ್ ಅಧ್ಯಕ್ಷತೆವಹಿಸಿದ್ದರು. ಸೆಲ್ಕೋ ಸೋಲಾರ್ ಸಂಸ್ಥೆಯ ಕಲಬುರಗಿಯ, ಯಾದಗೀರ ಜಿಲ್ಲೆಯ ಸಂಯೋಜಕ ಗುರುರಾಜ್ ಕುಲಕರ್ಣಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ದಯಾನಂದ ಬಸಣ್ಣ, ಗ್ರಾಪಂ ಅಧ್ಯಕ್ಷ ಹಣಮಂತರೆಡ್ಡಿ ನಾಮವಾರ, ಸದಸ್ಯರಾದ ಅಮಿದ್, ಯಲ್ಲಪ್ಪ, ನಾಗು ಸಾಹುಕಾರ ಗ್ರಾಮಸ್ಥರಾದ ಶಿವರಾಜ್ ದಳಪತಿ, ಲಾಲಪ್ಪ, ಶಿವಲೀಲಾ ಇದ್ದರು. ಶಿಕ್ಷಕ ಬಾಬುಶೆಟ್ಟಿ ಸ್ವಾಗತಿಸಿದರು. ಶರಣರೆಡ್ಡಿ ಕೋಡ್ಲಾ ನಿರೂಪಣೆ ಮಾಡಿದರು. ಅಶೋಕ ಗೌಡನಹಳ್ಳಿ ವಂದಿಸಿದರು.