

ಆಯನೂರು: ಗೌಡನಕೆರೆಯ ನಾಲೆಗಳಿಗೆ ಕಾಂಕ್ರೀಟ್ ಲೈನಿಂಗ್ ಮಾಡಿಸಲು ಸಿಎಂಗೆ ಮನವಿ ಮಾಡಿದ್ದು ಸಿಎಂ ಸಹ ಈ ಬಗ್ಗೆ ಆದೇಶ ಮಾಡಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ ನಾಯ್ಕ ತಿಳಿಸಿದರು.
ಸೋಮವಾರ ಆಯನೂರು ಸಮೀಪದ ಗೌಡನಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿ, 24 ಕೋಟಿ ರೂ. ಅನುದಾನದಲ್ಲಿ ಒಟ್ಟು 27 ಕಿಮೀ ನಾಲೆ ದುರಸ್ತಿ ಅನುಮತಿಗೆ ಇಲಾಖೆಗೆ ಆದೇಶ ಕಳುಹಿಸಲಾಗಿದೆ ಎಂದರು.
ಗೌಡನಕೆರೆ ತುಂಬಿದರೆ 50ರಿಂದ 60 ಕರೆಗಳು ತುಂಬುತ್ತವೆ. ಇದರಿಂದ ಹಾರನಹಳ್ಳಿ, ವೀರಣ್ಣನ ಬೆನವಳ್ಳಿ, ಮೈಸವಳ್ಳಿ, ಮುದುವಾಲ ಈ ಭಾಗದ ಕೆರೆಗಳು ತುಂಬಲಿವೆ. ಜತೆಗೆ 250ಕ್ಕೂ ಹೆಚ್ಚು ಎಕರೆಗೂ ಹೆಚ್ಚು ಜಮೀನಿಗೆ ಅನುಕೂಲವಾಗುತ್ತದೆ. ಗೌಡನಕೆರೆಯಿಂದ ನೀರು ಹರಿದು ಹೋಗುವ ನಾಲೆಗೆ 1.75 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಅದು ಕೆಲಸವಾಗದೆ ಬಿಲ್ ಮಾಡಲಾಗಿದೆ ಎಂದು ಹಿಂದೆ ಧರಣಿ ಮಾಡಲಾಗಿತ್ತು. ಕಳೆದ ವರ್ಷ 1.25 ಕೋಟಿ ರೂ. ಅನುದಾನದಲ್ಲಿ 27 ಕಿಮೀ ಹೊಸ ನಾಲೆ ಮಾಡಿದ್ದು ಪುರದಾಳು ಹಾಯ್ಹೊಳೆ ಹಾಗೂ ಗೌಡನಕೆರೆ ಸೇರಿ ಒಟ್ಟು 40 ಕಿಮೀ ನಾಲೆ ಮಾಡಿಸಲಾಗಿದೆ. ಆದರೆ ನಾಲೆಯಲ್ಲಿ ಗಿಡಗಂಟೆ ಬೆಳೆದು ಹಾರನಹಳ್ಳಿ, ಮುದುವಾಲ, ವೀರಣ್ಣನ ಬೆನವಳ್ಳಿ ಭಾಗದ ರೈತರು ಗೋಳಾಡುವಂತಾಗಿದೆ ಎಂದá- ತಿಳಿಸಿದರು.
ಶಾಸಕರ ಪತ್ನಿ ರತ್ನಾಕುಮಾರಿ, ಬಿಜೆಪಿ ತಾಲೂಕು ಅಧ್ಯಕ್ಷ ರತ್ನಾಕರ ಶೆಣೈ, ಜಿಪಂ ಸದಸ್ಯೆ ಸೌಮ್ಯಾ ಭೋಜಾನಾಯ್್ಕ ಗಿರೀಶ್, ಆಯನೂರು ಶಿವಾನಂದಪ್ಪ, ಲತಾ ನಿರಂಜನ್, ಶಕುಂತಲಾ ಮಹೇಶ್ವರಪ್ಪ, ಮಹೇಶ್, ಕೃಷ್ಣಮೂರ್ತಿ, ಸೂಡೂರು ಸುಧಾಕರ್, ಅರುಣ್ ಇತರರಿದ್ದರು. ಗೌಡನಕೆರೆ ಅಚ್ಚುಕಟ್ಟು ಪ್ರದೇಶದ ರೈತರು ಸೇರಿ ಹಾರನಹಳ್ಳಿ, ಕುಂಸಿ, ಆಯನೂರು, ಕೋಹಳ್ಳಿ, ಸಿರಿಗೆರೆ, ತಮ್ಮಡಿಹಳ್ಳಿ, ಇಟ್ಟಿಗೆಹಳ್ಳಿ ಭಾಗದ ರೈತರು ಭಾಗವಹಿಸಿದ್ದರು.
ನಾಲೆ ದುರಸ್ತಿಗೆ ಕರೊನಾ ಕಾರಣದಿಂದ ಹಣದ ಅಡಚಣೆ ಆಗಿದೆ. ಈ ಬಗ್ಗೆ ಸಿಎಂಗೆ ತಿಳಿಸಲಾಗá-ವುದು. ಹೊಸಳ್ಳಿ ನೀರಾವರಿ ಕಾಮಗಾರಿ ನಡೆಯುತ್ತಿದ್ದು ಇದರಲ್ಲಿ 70 ಕೆರೆ ತುಂಬಿಸುವಂತಾಗಿದೆ. ಮಲೆಶಂಕರ, ಮಂಜರಿಕೊಪ್ಪ ಹಾಗೂ ಸೀಗೆಹಳ್ಳ ಭಾಗದ ಕೆಲವು ಕೆರೆಗಳು ಬಿಟ್ಟು ಹೋಗಿವೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಕೆ.ಬಿ.ಅಶೋಕ್ ನಾಯ್ಕ ಶಾಸಕ