

ಕಲಬುರಗಿ: ಗೌಡ ಪದ ಬಳಕೆ ಜನ ಸೇವೆಯಿಂದ ಬಂದಿದ್ದು, ಗೌಡ ಒಂದೇ ಜಾತಿಗೆ ಸೀಮಿತವಾಗಿಲ್ಲ. ಯಾರೂ ಜನಸೇವೆ ಕೈಗೊಳ್ಳುತ್ತಾರೊ ಅವರನ್ನು ಗೌಡ ಎಂದು ಕರೆಯಲಾಗುತ್ತಿದೆ ಎಂದು ವಿಶ್ವ ಹಿಂದೂ ಪರಿಷತ್ನ ಪ್ರಮುಖ ಲಿಂಗರಾಜಪ್ಪ ಅಪ್ಪ ಹೇಳಿದರು.
ನಗರದ ಕನ್ನಡ ಭವನದಲ್ಲಿ ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಪಾಳಾ ಕೊಡಮಾಡುವ ಗೌಡ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿದ ಅವರು, ಊರಿನ ಹಿತ ಬಯಸುವ ಕಾರ್ಯ ಗೌಡರದ್ದಾಗಿತ್ತು. ಎಲ್ಲರಿಗೂ ನ್ಯಾಯ ಕೊಡಿಸುವ ವ್ಯಕ್ತಿಯನ್ನು ಗ್ರಾಮದ ಮುಖಂಡ(ಗೌಡ) ಎಂದು ಕರೆಯಲಾಗುತ್ತಿದೆ. ಬೇರೆ ಬೇರೆ ಜನಾಂಗದವರು ಕೂಡ ಗೌಡಕಿಯನ್ನು ಮಾಡಿದ್ದಾರೆ ಎಂದರು.
ಗ್ರಂಥಾಲಯ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಗ್ರಂಥಾಲಯ ಇಲಾಖೆ ನಿದರ್ೇಶಕ ಡಾ.ಸತೀಶ ಹೊಸಮನಿ ಅವರನ್ನು ಶಾಸಕ ಬಸವರಾಜ ಮತ್ತಿಮೂಡ ಅವರು ಚಿನ್ನದ ಪದಕದೊಂದಿಗೆ ಗೌಡ ಪ್ರಶಸ್ತಿ ಪ್ರದಾನ ಮಾಡಿದರು.
ಶ್ರೀಪ್ರಭು ತಾಯಿ (ಧಾಮರ್ಿಕ), ವಿಜಯವಾಣಿ ಪತ್ರಿಕೆ ಮುಖ್ಯ ವರದಿಗಾರ ಜಯತೀರ್ಥ ಪಾಟೀಲ್, ಹಿರಿಯ ಪತ್ರಕರ್ತ ಶಂಕರ ಕೋಡ್ಲಾ, ಪತ್ರಕರ್ತ ಬಾಲಾಜಿ ಚಿತ್ತೇಕರ (ಮಾಧ್ಯಮ), ಸುಭಾಶ್ಚಂದ್ರ ಕಶೆಟ್ಟಿ, ರತ್ನಾ ಕಾಳೇಗೌಡ (ಸಾಹಿತ್ಯ), ಬಸವರಾಜ ಮಾಹೂರ (ಕೃಷಿ, ಮತ್ತು ಉದ್ಯಮ), ಶಮ್ಸುದ್ದೀನ್ ಗುಂಡಗುತರ್ಿ, ವೀರೇಶ ಕಂದಗಲ್ (ಸಮಾಜ ಸೇವೆ, ಸಂಘಟನೆ), ಡಾ.ನಾಗಪ್ಪ ಗೋಗಿ (ಶಿಕ್ಷಣ), ಡಾ.ಎಸ್.ಎಸ್.ಗುಬ್ಬಿ (ವೈದ್ಯಕೀಯ), ಪ್ರಶಾಂತ ಗೋಲ್ಡ್ಸ್ಮಿತ್(ಚಿತ್ರಕಲಾ ಕ್ಷೇತ್ರ) ಅವರ ಅಮೋಘ ಸಾಧನೆ ಗುರುತಿಸಿ ಬೆಳ್ಳಿ ಪದಕದೊಂದಿಗೆ ಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಖೇಳಗಿ ಶಿವಲಿಂಗೇಶ್ವರ ಮಠದ ಶ್ರೀ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಬಸವರಾಜ ಮತ್ತಿಮಡು ಪ್ರಶಸ್ತಿ ಪ್ರದಾನ ಮಾಡಿದರು. ಜಿಪಂ ಸದಸ್ಯ ಅರುಣಕುಮಾರ ಪಾಟೀಲ್ ಅವರು ಗೌಡ ಪ್ರಶಸ್ತಿ ಪುರಸ್ಕೃತರ ಮಾಹಿತಿಯನ್ನೊಳಗೊಂಡ ಪುಸ್ತಕ ಬಿಡುಗಡೆಗೊಳಿಸಿದರು.
ಎ.ಕೆ. ರಾಮೇಶ್ವರ, ಪ್ರಕಾಶಕ ಬಸವರಾಜ ಕೋನೆಕ್, ಕುಪೇಂದ್ರ ಪಾಟೀಲ್, ಡಾ. ಕಲ್ಯಾಣರಾವ ಪಾಟೀಲ್, ಶಿವಕವಿ ಜೋಗೂರ, ಡಾ.ಶಿವಶಂಕರ ಬಿರಾದಾರ, ಶಿವರಂಜನ್ ಸತ್ಯಂಪೇಟೆ, ಡಾ.ಶ್ರೀ ಶೈಲ ಬಿರಾದಾರ, ಡಾ.ಶರಣಬಸಪ್ಪ ವಡ್ಡನಕೇರಿ, ಕೆ.ಎಸ್.ಬಂಧು, ರಮಾನಾಥ ಬಂಢಾರಿ, ಡಾ.ಸೂರ್ಯಕಾಂತ ಪಾಟೀಲ್, ಡಾ. ಚಿ.ಸಿ.ನಿಂಗಣ್ಣ, ಪ್ರೊ.ಶಂಕರಲಿಂಗ ಹೆಂಬಾಡಿ, ನಾಗರಾಜ ಕಲ್ಲಾ, ವಿಶ್ವನಾಥ ಪಾಟೀಲ್ ಗೌನಳ್ಳಿ, ಮೇಘರಾಜ ಅರಳಿ, ಬಸಲಿಂಗಪ್ಪ ಬಿಲಗುಂದಿ, ಪರಮೇಶ್ವರ ದಂಡಿನಕರ್, ವೀರಣ್ಣ ಪಾಟೀಲ್ ಉಪಸ್ಥಿತರಿದ್ದರು.
ಸುಭಾಶ್ಚಂದ್ರ ಪಾಟೀಲ್ ಸ್ಮಾರಕ ಜನಕಲ್ಯಾಣ ಟ್ರಸ್ಟ್ನ ಅಧ್ಯಕ್ಷ ಶರಣಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ರವಿಕುಮಾರ ಆಳಂದ ಮತ್ತು ಸಂಗಡಿಗರು ಪ್ರಾರ್ಥಿ ಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಸ್ವಾಗತಿಸಿದರು. ಪ್ರೊ.ಶಿವರಾಜ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು.