

ಬೀದರ್: ಗೋಹತ್ಯೆ ನಿಷೇಧ ವಿಧೇಯಕಕ್ಕೆ ಸರ್ಕಾರ ಯಶಸ್ವಿಯಾಗಿ ಅಂಗೀಕಾರ ಪಡೆದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಜೆಪಿಯಿಂದ ಗೋವುಗಳ ಪೂಜೆ ಮಾಡುವ ಮೂಲಕ ಸಂಭ್ರಮಿಸಲಾಯಿತು.
ನಗರ ಸೇರಿದಂತೆ ಎಲ್ಲ ತಾಲೂಕು, ಹೋಬಳಿ ಕೇಂದ್ರದಲ್ಲಿ ಗೋ ಪೂಜೆ ಜರುಗಿದವು. ವಿವಿಧ ಗೋ ಶಾಲೆಗಳಲ್ಲಿ ಕಾರ್ಯಕ್ರಮಗಳು ನಡೆದವು. ಕಠಿಣ ಕ್ರಮಗಳುಳ್ಳ ವಿಧೇಯಕ ಮಂಡನೆಯಲ್ಲಿ ವಿಶೇಷ ಪಾತ್ರ ವಹಿಸಿರುವ ಸಿಎಂ ಯಡಿಯೂರಪ್ಪ ಹಾಗೂ ಜಿಲ್ಲೆಯವರಾದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಅವರ ಪರ ಜೈಘೋಷಗಳು ಮೊಳಗಿದವು.
ಬಿಜೆಪಿ ನಗರ ಘಟಕದಿಂದ ಬೀದರ್ ರಾಮಕೃಷ್ಣ ವಿವೇಕಾನಂದ ಆಶ್ರಮದ ಗೋ ಶಾಲೆಯಲ್ಲಿ ಕಾರ್ಯಕ್ರಮ ಜರುಗಿತು. ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ನೇತೃತ್ವದಲ್ಲಿ ಬಿಡಿಎ ಅಧ್ಯಕ್ಷ ಬಾಬು ವಾಲಿ ಅವರು ಗೋಪೂಜೆ ನೆರವೇರಿಸಿದರು. ನಗರ ಅಧ್ಯಕ್ಷ ಹಣಮಂತ ಬುಳ್ಳಾ, ಪ್ರಮುಖರಾದ ಪ್ರಕಾಶ ಟೊಣ್ಣೆ, ಬಾಬುರಾವ ಕಾರಬಾರಿ, ಮಹೇಶ ಪಾಲಂ, ರಾಜಕುಮಾರ ಚಿದ್ರಿ, ಚಂದ್ರಕಲಾ ವಿಶ್ವಕರ್ಮ, ಲುಂಬಿಣಿ ಗೌತಮ, ಲಕ್ಷ್ಮೀಪ್ರಸನ್ನ ದೇಶಪಾಂಡೆ, ಕಿರಣ ಪಾಲಂ, ಸುನೀಲ ಗೌಳಿ, ಅನೀಲ ರಾಜಗೀರಾ, ರಮೇಶ ಬಿರಾದಾರ, ಸಂತೋಷ ಪಾಟೀಲ್, ಪವನ ಉಂಡೆ, ಗೋಪಾಲ ಕೃಷ್ಣ, ಇತರರಿದ್ದರು.
ಅಲಿಯಂಬರ್: ಬೀದರ್ ತಾಲೂಕಿನ ಅಲಿಯಂಬರ್ ನಲ್ಲಿ ಬಿಜೆಪಿ ಬೀದರ್ ಗ್ರಾಮೀಣ ಮಂಡಲದಿಂದ ಗೋಪೂಜೆ ನೆರವೇರಿತು. ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪೀರಪ್ಪ ಔರಾದೆ, ಪಂಢರಿ ಲದ್ದೆ, ಲಕ್ಷ್ಮಣ ರಾಠೋಡ, ಸಿದ್ದೋಬಾ ಲೌಟೆ, ಧರ್ಮೇಂದ್ರ ಮಚಕೂರಿ, ಶಿವಕುಮಾರ ಸ್ವಾಮಿ, ದೀಪಕ್ ಚಿದ್ರಿ, ಗುರಪ್ಪ ರಕ್ಷೆ ಇತರರಿದ್ದರು.
ಔರಾದ್: ತಾಲೂಕು ಬಿಜೆಪಿಯಿಂದ ಪಟ್ಟಣದ ಅಮರೇಶ್ವರ ಗೋ ಶಾಲೆಯಲ್ಲಿ ಗೋ ಪೂಜೆ ಜರುಗಿತು. ಮುಖಂಡರು ಗೋವಿಗೆ ಪೂಜೆ ನೆರವೇರಿಸಿದ ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ತಾಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಮಾತನಾಡಿ, ಈ ವಿಧೇಯಕ ಮಂಡಿಸುವಲ್ಲಿ ಕ್ಷೇತ್ರದ ಶಾಸಕರೂ ಆದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪಾತ್ರ ಹಿರಿದು. ಯಡಿಯೂರಪ್ಪ ಅವರ ಸಹಕಾರದೊಂದಿಗೆ ಸಚಿವರು ವಿಶೇಷ ಕಾಳಜಿ ವಹಿಸಿದ ಕಾರಣ ಕಾಯ್ದೆ ಮಂಡನೆಯಾಗಿದೆ ಎಂದು ಹೇಳಿದರು.
ಜಿಪಂ ಸದಸ್ಯ ಮಾರುತಿ ಚವ್ಹಾಣ್, ಪ್ರಮುಖರಾದ ಡಾ.ಕಲ್ಲಪ್ಪ ಉಪ್ಪೆ, ರಮೇಶ ದೇವಕತ್ತೆ, ಶಿವರಾಜ ಅಲ್ಮಾಜೆ, ಸಂಜು ಒಡೆಯರ್, ಅಶೋಕ ಮೇತ್ರೆ, ಬ್ರಹ್ಮಾನಂದ ಸರಸ್ವತಿ, ಸುಜೀತ್ ರಾಠೋಡ್, ಬಾಲಾಜಿ ಠಾವರೆ, ಬಸವರಾಜ ಹಳ್ಳೆ ಇತರರಿದ್ದರು.