ಗೋವುಗಳೊಂದಿಗೆ ಸಮಯ ಕಳೆದ ಚವ್ಹಾಣ್

goshale
Published on

ಬೀದರ್: ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಗುರುವಾರ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮ ಗೋಶಾಲೆಗೆ ಭೇಟಿ ನೀಡಿ ಗೋವುಗಳೊಂದಿಗೆ ಕೆಲ ಸಮಯ ಕಳೆದರು.

ಗೋಪೂಜೆ ನೆರವೇರಿಸಿ ಆಹಾರ ಉಣಿಸುವ ಮೂಲಕ ಸಂತಸಪಟ್ಟರು. ಗೋವುಗಳ ಪಾಲನೆ-ಪೋಷಣೆ, ನಿರ್ವಹಣೆ, ದೇಸಿ ಹಸುಗಳ ಸಂರಕ್ಷಣೆ ಮತ್ತು ಸಂವರ್ಧನೆ ಕುರಿತು ಆಶ್ರಮದ ಶ್ರೀ ಸ್ವಾಮಿ ಜ್ಯೋತಿರ್ಮಯಾನಂದಜಿ ಸಚಿವರಿಗೆ ಮಾಹಿತಿ ನೀಡಿದರು.

ಧಾರ್ಮಿಕ ಜತೆಗೆ ಸಾಮಾಜಿಕ, ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವುದು ಮತ್ತು ಗೋಶಾಲೆಯನ್ನು ಮಾದರಿಯಾಗಿ ನಡೆಸುಕೊಂಡು ಬರುತ್ತಿರುವ ಶ್ರೀಗಳ ಕೆಲಸವನ್ನು ಕೊಂಡಾಡಿದ ಚವ್ಹಾಣ್, ಗೋವುಗಳನ್ನು ದತ್ತು ಪಡೆದು ಪೋಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಪುಣ್ಯಕೋಟಿ ದತ್ತು ಯೋಜನೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಪ್ರಮುಖರಾದ ಪ್ರತೀಕ್ ಚವ್ಹಾಣ್, ಸುರೇಶ ಭೋಸ್ಲೆ, ಗುರುನಾಥ ರಾಜಗೀರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net