

ಚಿತ್ರದುರ್ಗ: ಗೋವುಗಳಿಗೆ ರಕ್ಷಣೆ ಒದಗಿಸುವ ದೃಷ್ಟಿಯಿಂದ ಈ ಗೋ ಶಾಲೆ ಸ್ಥಾಪನೆಯಾಗಿದೆ ಎಂದು ಶ್ರೀ ಯಾದವ ಗುರುಪೀಠದ ಶ್ರೀ ಜಗದ್ಗು ರು ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಹೇಳಿದರು.
ವೇದಾಂತ ಸೇಸಾ ಗೋವಾ ಐರನ್‌ಒರ್ ಕರ್ನಾಟಕ,ಬೆಂಗಳೂರಿನ ದಿ ಅನಿಮಲ್ ಕೇರ್ ಆರ್ಗನೈಸೇಷನ್,ಮುಂಬಯಿನ ಅನಿಲ್ ಅಗರ್‌ವಾಲ್ ಫೌಂಡೇಷನ್‌ನಿಂದ ನಗರದ ಶ್ರೀ ಯಾದವ ಮಠದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಗೋ ಶಾಲೆ ಉದ್ಘಾಟನಾ ಕಾರ‌್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು,ಆಶ್ರಯವಿಲ್ಲದೆ ಬೀದಿಯಲ್ಲಿರುವ ಗೋವುಗಳನ್ನು ರಕ್ಷಿಸುವ ಉದ್ದೇಶದಿಂದ ಗೋ ಶಾ ಲೆ ಸ್ಥಾಪಿಸಲಾಗಿದೆ. ಇದು ಸಮೃದ್ಧವಾಗಿ ಬೆಳೆಯಲಿ,ತನ್ನ ಉದಾತ್ತ ಉದ್ದೇಶವನ್ನು ಸಾಧಿಸಲಿ,ಈ ಯೋಜನೆ ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸಲಿ ಎಂದರು.
ವಿಧಾನ ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್ ಮಾತನಾಡಿ,ಕರುಣೆ, ಸಹಾನುಭೂತಿಯ ಸಂಕೇತವಾಗಿ ಈ ಗೋಶಾಲೆ ರೂಪುಗೊಂಡಿ ದೆ. ನಮ್ಮ ಶ್ರೀಮಂತ ಸಾಂಸ್ಕೃತಿಕ ಮತ್ತು ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದಕ್ಕೆ ಈ ಗೋಶಾಲೆ ಕೊಡುಗೆ ನೀಡಲಿದೆ ಎಂದರು.
ವೇದಾಂತ ಐಒಕೆ ಸಿಇಒ ಶ್ರೀಶೈಲಾ ಗೌಡ ಮಾತನಾಡಿ,ಈ ಗೋಶಾಲೆಯಲ್ಲಿ ಬೀದಿಯಲ್ಲಿರುವ ಮತ್ತು ಗಾಯಗೊಂಡಿರುವ ಗೋವು ಗಳಿಗೆ ರಕ್ಷಣೆ,ಚಿಕಿತ್ಸೆ ಮತ್ತು ಪುನರ್ವಸತಿ ನೀಡಲಾಗುತ್ತದೆ ಎಂದರು. ಐಒಕೆ ಕಾರ್ಪೊರೇಟ್ ವ್ಯವಹಾರಗಳ ಮುಖ್ಯಸ್ಥ ಪಿ.ನಾರಾಯಣ್, ಸಿಎಸ್‌ಆರ್‌ಇಆರ್ ಮುಖ್ಯಸ್ಥ ರವಿಬಿಸಗುಪ್ಪಿ ಮತ್ತು ಟಾಕೊ ಮುಖ್ಯಸ್ಥ ಡಾ.ಪ್ರಿನ್ಸಿ ಜಾನ್ ಉಪಸ್ಥಿತರಿದ್ದರು.