

ಬೇಲೂರು: ತುಳಸಿ ಹಬ್ಬದ ಅಂಗವಾಗಿ ಬೇಲೂರು ಪಟ್ಟಣದ ಶೃಂಗೇರಿ ಶಾರದ ಪೀಠದಲ್ಲಿ ಮುತ್ತೈದೆಯರಿಂದ ಗೋವಿಗೆ ಅಕ್ಕಿ, ಬೆಲ್ಲ ಕುಂಕುಮಾರ್ಚನೆ ಮೂಲಕ ಗೋಪೂಜೆ ನೆರವೇರಿಸಲಾಯಿತು.
ಶೃಂಗೇರಿ ಶಾರದ ಪೀಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಹಿಂದೂ ಸಂಪ್ರದಾಯದ ಪ್ರಕಾರ ಗೋವಿಗೆ ವಿಶೇ? ಸ್ಥಾನವಿದ್ದು ಗೋವಿನಲ್ಲಿ ಮುಕ್ಕೋಟಿ ದೇವರು ನೆಲೆಸಿದ್ದಾರೆ ಎಂಬ ಪ್ರತೀತಿ ಇದೆ. ಅಲ್ಲದೆ ಶೃಂಗೇರಿ ಜಗದ್ಗುರುಗಳ ಆದೇಶದಂತೆ ಇಂದು ತುಳಸಿ ಹಬ್ಬದ ಅಂಗವಾಗಿ ಗೋಪೂಜೆ ಮಾಡುತಿದ್ದೇವೆ ಎಂದರು.
ಶೃಂಗೇರಿ ಶಾರದಾ ಪೀಠದ ಹಿರಣ್ಣಯ್ಯ, ವಸಂತ್ ಕುಮಾರ್, ಮಠ ಮುದ್ರೆ ಪ್ರಸನ್ನ, ಸುಮಂತ್ ಕುಮಾರ್ ಶರ್ಮ, ರಾಮಣ್ಣ, ಗಾಯಿತ್ರಿ ಭಜನಾ ಮಂಡಳಿ ಸದಸ್ಯರಿದ್ದರು.