

ಧಾರವಾಡ: ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಪ್ರೊ.ಸಿ.ಎಚ್. ಮರಿದೇವರ ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ನಗರದ ಮಾಳಮಡ್ಡಿ ಕೆ.ಇ.ಬೋರ್ಡ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎನ್.ಎಸ್.ಗೋವಿಂದರಡ್ಡಿ ಭಾಜನರಾಗಿದ್ದಾರೆ.
ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಪರಿಗಣಿಸಿ ನೀಡಿ ಗೌರವಿಸಲಾಗಿದೆ. ಪ್ರಶಸ್ತಿಯು 20 ಸಾವಿರ ರೂ. ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಲೆ ಮುಖ್ಯೋಪಾಧ್ಯಾಯ ಎನ್.ಎಸ್.ಗೋವಿಂದರಡ್ಡಿ ಅವರಿಗೆ ಸಂಸ್ಥೆ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ, ಕಾರ್ಯದರ್ಶಿ ಡಿ.ಎಸ್.ರಾಜಪುರೋಹಿತ, ಖಜಾಂಚಿ ಎಸ್.ಎನ್. ಪರಾಂಡೆ, ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಡಾ. ಕೃಷ್ಣ ಕುಲಕರ್ಣಿ, ನಿತಿನ್ ಕುಲಕರ್ಣಿ, ಕರ್ನಾಟಕ ಹೈಸ್ಕೂಲ್ ಆಡಳಿತಾಧಿಕಾರಿ ಜಿ.ಆರ್.ಭಟ್, ಆಡಳಿತ ಮಂಡಳಿ ಸದಸ್ಯರು, ಸಂಸ್ಥೆ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.