ಗೋವಾ ಮದ್ಯ ವಶ, ಇಬ್ಬರ ಬಂಧನ

01
Published on

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ-ಚೋರ್ಲಾ ಹೆದ್ದಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಾಹನದ ಮೇಲೆ ಗುರುವಾರ ಜಿಲ್ಲಾ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, 135 ಲೀ. ಗೋವಾ ಮದ್ಯ ಜಪ್ತಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರ ಬೀಡ ಜಿಲ್ಲೆಯ ಪಾಟೋದ ತಾಲೂಕಿನ ನಾಳವಂಡಿ ಗ್ರಾಮದ ಗೋರಕ್ಷನಾಥ ನವನಾಥ ಪನ್ನಾಳಕರ (32), ಸುರೇಶ ಗೋರಖ ಮೋಘೆ (30) ಬಂಧಿತರು. ಕಣಕುಂಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಕಾರೊಂದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋಲ್ಡ್‌ನ ಏಸ್ ವಿಸ್ಕಿ 108 ಬಾಟಲಿಗಳು ಒಟ್ಟು 81.ಲೀ, ಬ್ಲ್ಯೂ7 ವಿಸ್ಕಿ 72 ಬಾಟಲಿಗಳು ಒಟ್ಟು 54 ಲೀ ಸೇರಿದಂತೆ 135 ಲೀ ಗೋವಾ ಮದ್ಯ ಜಪ್ತಿ ಮಾಡಿಕೊಳ್ಳಲಾಗಿದೆ.

ಬೆಳಗಾವಿ ವಿಭಾಗದ ಅಬಕಾರಿ ಅಪರ ಆಯುಕ್ತ ಡಾ.ವೈ.ಮಂಜುನಾಥ, ಜಂಟಿ ಆಯುಕ್ತ ಫೀರೋಜಖಾನ್ ಕಿಲ್ಲೇದಾರ, ಉಪ ಆಯುಕ್ತೆ ವನಜಾಕ್ಷಿ ಎಂ. ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ರವಿ ಎಂ. ಮುರಗೋಡ, ನೇತೃತ್ವದ ತಂಡದಲ್ಲಿ ಮಂಜುನಾಥ ಗಲಗಲಿ, ಬಾಳಗೌಡಾ ಪಾಟೀಲ, ಅಮೃತ ಪೂಜಾರಿ, ವಿಠ್ಠಲ ಕ್ವಾರಿ, ಅರುಣ ಬಂಡಗಿ, ಬಣಪ್ಪ ಮೆಳವಂಕಿ ಮತ್ತು ಎಸ್.ಎಸ್.ಟಿ. ತಂಡದ ದಾಳಿ ಮಾಡಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net