ಗೋವನ್ನು ಉಳಿಸಲು ಹೋಗಿ ಬಾಲಕ ಸಾವು

18 7 SBD 1
Published on

ಶಹಾಬಾದ್: ವಿದ್ಯುತ್ ತಂತಿ ಬಳಿ ತೆರಳುತ್ತಿದ್ದ ಗೋವನ್ನು ಉಳಿಸಲು ಹೋಗಿ ದನಗಾಹಿ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಶಂಕರವಾಡಿ ಬಳಿ ಶನಿವಾರ ಬೆಳಗ್ಗೆ ಜರುಗಿದೆ.
ಬೀರಣ್ಣ ಭೀಮಾಶಂಕರ (15) ಮೃತ ಬಾಲಕ. ಬೆಳಗ್ಗೆ 11ರ ಸುಮಾರಿಗೆ ಆಕಳುಗಳನ್ನು ಮೇಯಿಸಲು ಹೆದ್ದಾರಿ ಪಕ್ಕದ ರಘೋಜಿ ಕಾಖರ್ಾನೆ ಕಂಪೌಂಡ್ ಗೋಡೆಯ ಬಳಿ ಹೋಗಿದ್ದ. ಆದರೆ ಈ ವೇಳೆ ಹಸುವೊಂದು ಕಾಖರ್ಾನೆಗೆ ವಿದ್ಯುತ್ ಸರಬರಾಜು ಮಾಡುವ ಎಲ್ಟಿ ವಿದ್ಯುತ್ ತಂತಿ ತಗುಲಿ ಒದ್ದಾಡುತ್ತಿತ್ತು. ಇದನ್ನು ಕಂಡ ಬೀರಣ್ಣ ಹಸುವನ್ನು ರಕ್ಷಿಸಲು ಹೋಗಿ, ತಾನೇ ವಿದ್ಯುತ್ಗೆ ಬಲಿಯಾಗಿದ್ದಾನೆ.ಡಿವೈಎಸ್ಪಿ ವೆಂಕಣ್ಣಗೌಡ ಪಾಟೀಲ್, ಪಿಐ ಬಿ.ಅಮರೇಶ, ಜೆಸ್ಕಾಂ ಎಇಇ ಸೈಯದ್ ಅನ್ವರ್, ಸೆಕ್ಷನ್ ಅಧಿಕಾರಿ ಸಿದ್ದಪ್ಪ ಹಂಚನಾಳ, ಜೆಸ್ಕಾಂ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಾಶೀನಾಥ ದೇವರ ಭೇಟಿ ನೀಡಿದ್ದಾರೆ. ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net