ಗೋರಿಗೆ ಕುಂಕುಮ ಹಚ್ಚಿರುವುದು ಕಿಡಿಗೇಡಿ ಕೃತ್ಯ

22 ckm 11 ranganath
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್
Published on

ಚಿಕ್ಕಮಗಳೂರು: ಗುರು ದತ್ತಾತ್ರೇಯ ಪೀಠದಲ್ಲಿ ಗೋರಿಗೆ ಕುಂಕುಮ ಹಚ್ಚಿದ್ದಾರೆನ್ನುವುದು ಕೆಲವು ಮುಸ್ಲಿಂ ಬಾಂಧವರ ಕಿಡಿಗೇಡಿ ಕೃತ್ಯ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಟಿ.ರಂಗನಾಥ್ ಆರೋಪಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುದತ್ತಾತ್ರೇಯ ಸ್ವಾಮಿಗಳು ಜೀವಿತವಿದ್ದದ್ದು ಸಾವಿರಾರು ವರ್ಷಗಳ ಹಿಂದೆ. ಆ ಕಾಲದಲ್ಲಿ ಇಸ್ಲಾಂ ಧರ್ಮವೇ ಪ್ರಪಂಚದಲ್ಲಿರಲಿಲ್ಲ. ಹೀಗೆ ಅನೇಕ ವರ್ಷಗಳ ನಂತರದಲ್ಲಿ ಮುಸ್ಲಿಂ ಬಾಂಧವರು ಗೋರಿಗಳನ್ನು ಸೃಷ್ಠಿ ಮಾಡಿ ದಾದಾ ಹಯಾತ್ ಖಲಂದರ್ ರವರ ಸಮಾಧಿ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ಇಷ್ಟಕ್ಕೂ ಹಿಂದುಗಳು ಕುಂಕುಮ, ಹೂಗಳಿಂದ ಪೂಜೆ ಮಾಡುವುದು ದತ್ತಾತ್ರೇಯ ಪೀಠಕ್ಕೆ ಮತ್ತು ಪಾದುಕೆಗಳಿಗೆ, ಯಾವ ಗೋರಿಗಳಿಗೂ ಪೂಜೆ ಮಾಡುವುದು ನಮ್ಮ ಧರ್ಮದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ದತ್ತ ಜಯಂತಿಯ ಸಮಯದಲ್ಲಿ ಅಲ್ಲಿರುವ ಗೋರಿ ಎಂದು ಹೇಳುವ ಜಾಗವನ್ನು ಸಂಪೂರ್ಣ ಮುಚ್ಚಲಾಗುತ್ತದೆ. ಅದು ಯಾರಿಗೂ ಕಾಣಿಸುವುದಿಲ್ಲ. ದತ್ತಪೀಠ ಮತ್ತು ಪಾದಕೆಗಳಿಗೆ ಪೂಜೆ ಮಾಡುತ್ತೇವೆ. ಯಾವುದೇ ಗೋರಿ ಹಾಗೂ ಸಮಾಧಿಗಳಿಗೆ ಪೂಜೆ ಮಾಡುವುದು ಹಿಂದುಗಳಿಗೆ ಅವಶ್ಯಕತೆಯಿಲ್ಲ ಎಂದರು.

ಮುಸ್ಲಿA ಕಿಟಗೇಡಿಗಳು ಮಾಡಿರುವ ಆರೋಪ ಬರೀ ಸುಳ್ಳಿನ ಕಂತೆಯಾಗಿ ಸತ್ಯಕ್ಕೆ ದೂರವಾಗಿದೆ ಕಿಡಿಗೇಡಿಗಳು ಗೊಂದಲ ಉಂಟು ಮಾಡುವ ಪ್ರಯತ್ನ ಎಂದು ಆರೋಪಿಸಿದರು.

ದತ್ತ ಗುಹೆಯ ಒಳಗೆ ಸಿಸಿಟಿವಿ ಇದ್ದು, ಅದರಲ್ಲಿ ನೋಡಲಿ. ನಂತರ ಈ ಕಿಡಿಗೇಡಿಗಳ ವಿರುದ್ಧ ಕಾನೂನು ರೀತಿಯ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ನಗರಾಧ್ಯಕ್ಷ ದಿಲೀಪ್‌ಶೆಟ್ಟಿ, ಮುಖಂಡರಾದ ಶರತ್, ಶ್ಯಾಮ್, ಪ್ರಸಾದ್, ಅಮೀನ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net