ಗೋಮಾಂಸ ಮಾರುತ್ತಿದ್ದ ಮೂವರ ಬಂಧನ

istockphoto-1135661328-612x612
Published on


ಅರಕಲಗೂಡು: ಗೋಮಾಂಸ ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.


ಪಟ್ಟಣದ ಸುಬಾಷ್‌ನಗರ ಬಡಾವಣೆಯಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವ ಮಾಹಿತಿ ಆಧರಿಸಿ ಭಾನುವಾರ ಬೆಳಗ್ಗೆ ಸಿಪಿಐ ರಘುಪತಿ ನೇತೃತ್ವದಲ್ಲಿ ಪಿಎಸ್‌ಐ ಧನರಾಜ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಮಾರಾಟಕ್ಕೆ ಇಡಲಾಗಿದ್ದ 40 ಕೆಜಿ ಗೋಮಾಂಸವನ್ನು ವಶಕ್ಕೆ ಪಡೆದರಲ್ಲದೆ 5 ಹೋರಿ ಕರುಗಳನ್ನು ರಕ್ಷಣೆ ಮಾಡಿದರು. ಈ ಸಂಬಂಧ ಆರೋಪಿಗಳಾದ ಮಹೇಶ್, ರಮೇಶ್, ಸ್ವಾಮಿ ಎಂಬುವರನ್ನು ಬಂಧಿಸಿದ್ದು ಉಳಿದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಂಡಿದ್ದಾರೆ. ಇದೇ ಬಡಾವಣೆಯ ಮನೆಯೊಂದರ ಮೇಲೆ ದಾಳಿ ನಡೆಸಿ ಸಂಗ್ರಹಿಸಿಡಲಾಗಿದ್ದ ಗೋವಿನ ಚರ್ಮಗಳನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಗಳ ಪತ್ತೆಗಾಗಿ ತನಿಖೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net