ಗೋಮಾಂಸ ಮಾರಲು ಯತ್ನಿಸುತ್ತಿದ್ದವರ ಬಂಧನ

2blrp1
ಬೇಲೂರು ಪಟ್ಟಣದ ದಾವೂದ್ ಸಾಬ್ ಬೀದಿಯಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲೆತ್ನಿಸಿದ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು.
Published on

ಬೇಲೂರು: ಬೇಲೂರು ಪಟ್ಟಣದ ದಾವೂದ್ ಸಾಬ್ ಬೀದಿಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬೇಲೂರು ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ದಾವೂದ್ ಸಾಬ್ ಬೀದಿಯ ಸಯ್ಯದ್ ಜೀಶನ್ ಹಾಗೂ ಮೀನು ಮಾರುಕಟ್ಟೆ ಸಮೀಪದ ಪರ್ಹಾನ್ ಬಂಧಿತರು. ದಾವೂದ್ ಸಾಬ್ ಬೀದಿಯ ಮನೆಯೊಂದರಲ್ಲಿ ಅಕ್ರಮವಾಗಿ ಗೋವನ್ನು ಕಡಿದು ಮಾಂಸ ಮಾರಾಟ ಮಾಡಲೆತ್ನಿಸುತ್ತಿರುವ ಬಗ್ಗೆ ಬೇಲೂರು ಠಾಣೆ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ರವಿಕಿರಣ್ ನೇತೃತ್ವದ ಸಿಬ್ಬಂದಿ ತಂಡ, ಗುರುವಾರ ರಾತ್ರಿ 9.30ಕ್ಕೆ ದಿಢೀರ್ ದಾಳಿ ನಡೆಸಿ 20 ಸಾವಿರ ರೂ. ಮೌಲ್ಯದ ಗೋ ಮಾಂಸದೊಂದಿಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದರು. ದಾಳಿ ಸಂದರ್ಭ ಸಿಬ್ಬಂದಿ ದೇವರಾಜು, ದೇವೇಂದ್ರ, ಚೇತನ್, ಯತೀಶ ಹಾಗೂ ಪುರಸಭೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net