ಗೋಮಯ ದೀಪಾವಳಿ ಆಚರಿಸಿ

Veershetty Khyam
Published on

ಬೀದರ್: ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಪ್ರಸಕ್ತ ವರ್ಷ ಗೋಮಯ ಹಣತೆ ಬಳಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಮೊದಲ ಆದ್ಯತೆ ಕೊಡಬೇಕು ಎಂದು ಭಾರತೀಯ ಗೋ ಪರಿವಾರ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ಕೋರಿದ್ದಾರೆ.

ಗೋವಿನ ಸಗಣಿಯಿಂದ ತಯಾರಿಸಿದ ಹಣತೆಗಳಲ್ಲಿ ದೀಪ ಬೆಳಗಿಸುವ ಮೂಲಕ ಹಬ್ಬಕ್ಕೆ ಮೆರಗು ನೀಡಬೇಕು. ಪರಿಸರಕ್ಕೆ ಪೂರಕ ಈ ಗೋ ದೀಪ. ಪಟಾಕಿ ಉರಿಸಿ ಸಿಡಿಸಿ ವಾತಾವರಣ ಹಾಳು ಮಾಡುವ ಬದಲು ಗೋಮಯ ದೀಪ ಉರಿಸಿ ಪರಿಸರ ಇನ್ನಷ್ಟು ಶುದ್ಧಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.

ಚೀನಿ ವಸ್ತುಗಳಿಗಿಂತ ಸ್ವದೇಶಿ ವಸ್ತುಗಳನ್ನು ಬಳಸಬೇಕು. ಗೋ ಸಂತತಿ ಉಳಿಸುವ ಜತೆಗೆ ಗೋ ಉತ್ಪನ್ನಗಳನ್ನು ತಯಾರಿಸುವವರಿಗೂ ಪ್ರೋತ್ಸಾಹಿಸಬೇಕು. ಗೋವಿನಿಂದ ಉತ್ಪಾದನೆ ಆಗುವ ವಸ್ತುಗಳನ್ನು ಬಳಸುವ ಮೂಲಕ ಉದ್ಯಮಕ್ಕೆ ಬೆಂಬಲಿಸಬೇಕು. ಗೋವು ಹಾಲು ಉತ್ಪಾದನೆಗಷ್ಟೇ ಸೀಮಿತವಲ್ಲ. ವೈಜ್ಞಾನಿಕವಾಗಿ ಹತ್ತಾರು ಕೆಲಸಗಳಿಗೆ ಉಪಯುಕ್ತ ಎಂಬುದನ್ನು ಜನರು ಅರಿಯಬೇಕು. ಗೋ ಉತ್ಪನ್ನಗಳೊಂದಿಗೆ ವಿಶಿಷ್ಟವಾಗಿ ಬೆಳಕಿನ ಹಬ್ಬ ಆಚರಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ. ಗೋಮಯ ಹಣತೆಗಾಗಿ ಮೊ.97314 82534ಗೆ ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net