

ಮುಳಬಾಗಿಲು: ನಲಗುಂದ ನವಿಲಗುಂದ ೪೩ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ತಾಲ್ಲೂಕಿನ ಪದ್ಮಘಟ್ಟ ಗ್ರಾಮದ ಪ್ರಗತಿಪರ ರೈತ ಧÀರ್ಮ ರವರ ತೋಟದಲ್ಲಿ ಗೋ ಪೂಜೆ ಮಾಡುವ ಮುಖಾಂತರ ಹುತಾತ್ಮ ರೈತರಿಗೆ ಗೌರವ ಸಲ್ಲಿಸಿ ರೈತರಿಗೆ ಗಿಡ ವಿತರಣೆ ಮಾಡಲಾಯಿತು.
ವರ್ಷಪೂರ್ತಿ ರೈತ ಹಾಕಿದ ಬಂಡವಾಳ ಕೈಸೇರದೆ ಸರಿಯಾಗಿ ಬೆಳೆಬಾರದೆ ಸಂಕಷ್ಠಕ್ಕೆ ಒಳಗಾದ ರೈತ ಬೆಲೆ ಇದ್ದರೂ ಬೆಳೆ ಇಲ್ಲದೆ ತೊಂದರೆಗೆ ಸಿಲುಕಿ ಕೃಷಿ ಕ್ಷೇತ್ರವನ್ನೇ ರೈತರು ತೊರೆಯುವ ಪರಿಸ್ಥತಿ ಉಂಟಾಗಿದೆ ಈ ಬಗ್ಗೆ ಅಲೋಚನೆ ಮಾಡುವವರೇ ಇಲ್ಲವಾಗಿದೆ ಇನ್ನೊಂದಡೆ ತಿಂಗಳ ಸಂಬಳ ಬರದೆ ಇದ್ದರೆ, ಆಕಾಶವೇ ಕಳಚಿ ಬೀಳುವಂತೆ ಒದ್ದಾಡುವ ಜನಪ್ರತಿನಿಧಿಗಳು, ಅಧಿಕಾರಿಗಳು ಸರ್ಕಾರಿ ನೌಕರರು ರೈತರು ಕಛೇರಿಗಳಿಗೆ ಬಂದಾಗ ತಾಸ್ತಾರದಿಂದ ಕಾಣದೆ ಕೆಲಸ ಕಾರ್ಯಗಳನ್ನು ಸುಗಮವಾಗಿ ಮಾಡಿಕೊಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ರೈತನಿಗೆ ನಿಜವಾದ ಗೌರವ ಸಲ್ಲುತ್ತದೆ ಈ ನಿಟ್ಟಿನಲ್ಲಿ ರೈತ ಜಾಗೃತಿ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುವುದೆಂದು ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸಿ ತಿಳಿಸಿದರು.
ಸರ್ಕಾರ ರೈತ ವಿರೋದಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಿ ೧೦೦ ಕೋಟಿ ಅನುದಾನ ಬಿಡುಗಡೆ ಮಾಡುವ ಜೊತೆಗೆ ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ಬೆಳೆಗಳಿಗೆ ಪರಿಹಾರ ಒದಗಿಸುವ ಜೊತೆಗೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಜೊತೆಗೆ ಬಲವಂತ ಸಾಲ ವಸೂಲಿ ಮಾಡದಂತೆ ಬ್ಯಾಂಕ್‌ಗಳಿಗೆ ಸೂಚಿಸುವ ಜೊತೆಗೆ ರೈತರ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಕಾರ್ಯಕ್ರಮದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲುಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಕೃಷಿ ಕ್ಷೇತ್ರ ರೈತರ ಪಾಲಿಗೆ ಮುಳ್ಳಾಗಿದೆ. ರೈತರಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತಿಲ್ಲ. ಕಳಪೆ ಬೀಜಗಳು ದುಬಾರಿ ಗೊಬ್ಬರಿದಿಂದ ರೈತ ತೊಂದರೆ ಅನುಮಭವಿಸುತ್ತಿದ್ದಾನೆ. ಜೊತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಟೆಮೆಟೋ ಕ್ಯಾಪ್ಸಿಕಂ ವಾಣಿಜ್ಯ ಬೆಳೆಗಳಿಗೆ ಅತಿವೃಷ್ಟಿ ಅನಾವೃಷ್ಟಿ ಜೊತೆಗೆ ಭೀಕರ ರೋಗಗಳಿಂದ ರೈತರು ಹೈರಾಣಾಗಿದ್ದಾರೆ. ಮತ್ತೊಂದಡೆ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳದೆ ವ್ಯವಸಾಯವೇ ಬೇಡ ಎಂಬ ನಿರ್ಧಾರದಲ್ಲಿ ಇದ್ದು ಸರ್ಕಾರ ಕೂಡಲೇ ಗಮನ ಹರಿಸಬೇಕು ಎಂದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ನರಗುಂದ ನವಿಲಗುಂದ ಬಂಡಾಯ ರೈತರನ್ನು ಅಂದಿನ ಸಿ.ಎಂ. ಆರ್.ಗುಂಡೂರಾವ್ ನೇತೃತ್ವದ ಕಾಂಗ್ರೇಸ್ ಸರ್ಕಾರ ೧೪೯ ರೈತರನ್ನು ಗುಂಡಿಕ್ಕಿ ಕೊಲೆ ಮಾಡಿದರೆ ಇಂದು ಸರ್ಕಾರಗಳು ಗುಂಡು ಹಾರಿಸದೆ ೧೦ ಲಕ್ಷ ರೈತರನ್ನು ಕೊಲ್ಲಲಾಗಿದೆ. ಕರ್ನಾಟಕದಲ್ಲಿ ೪೦ ಸಾವಿರಕ್ಕೂ ಹೆಚ್ಚು ಅಧಿಕ ರೈತರು ತಮ್ಮ ಪ್ರಾಣ ತ್ಯಾಗವನ್ನು ಮಾಡಿದ್ದಾರೆ. ಇತ್ತೀಚಿಗೆ ೪೦ಕ್ಕೂ ಹೆಚ್ಚು ಕೃಷಿ ನಷ್ಠದಿಂದ ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಸರ್ಕಾರ ಬಗ್ಗೆ ನಿರ್ಲಕ್ಷವಹಿಸಿದೆ ಎಂದು ದೂರಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‌ಪಾಷ, ಜಿಲ್ಲಾ ಕಾರ್ಯಾದ್ಯಕ್ಷ ಹೆಬ್ಬಣಿ ಆನಂದ್‌ರೆಡ್ಡಿ, ಮುಖಂಡರಾದ ಬಂಗಾರಿ ಮಂಜು, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಸುನಿಲ್‌ಕುಮಾರ್, ರಾಜೇಶ್, ಭಾಸ್ಕರ್, ವಿಜಯ್‌ಪಾಲ್, ಗುರುಮೂರ್ತಿ, ದೇವರಾಜ್, ಶ್ರೀನಿವಾಸ್, ಜುಬೇರ್‌ಪಾಷ, ನವೀನ್, ಕೇಶವ, ಮಂಗಸಂದ್ರ ತಿಮ್ಮಣ್ಣ, ವಿಶ್ವನಾಥ್, ರಾಮಮೂರ್ತಿ, ರಾಮಸಾಗರ ವೇಣು, ಸುರೇಶ್ ಬಾಬು, ಯಲ್ಲಪ್ಪ, ಹರೀಶ್, ಆಂಜಿನಪ್ಪ ಇದ್ದರು.