

ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯ ವೆಂಕಟೇಶ್ವರ ಸ್ವಾಮಿ ದೇಗುಲದ ನೂತನ ಗೋಪುರ ಮತ್ತು ಕಳಸ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಫೆ. 18, 19ರಂದು ಹಮ್ಮಿಕೊಳ್ಳಲಾಗಿದೆ.
18ರ ಬೆಳಗ್ಗೆ 6ಕ್ಕೆ ಗಂಗಾ ಭಾಗೀರಥಿ, ಸ್ವಸ್ತಿ ಪುಣ್ಯಾಹ, ಗಣಪತಿ, ಧ್ವಜಪೂಜೆ, ಆಚಾರ್ಯ ವರುಣ, ನವಗ್ರಹ, ಅಷ್ಠದಿಕ್ಪಾಲಕ, ಪಂಚಬ್ರಹ್ಮ, ವಿಷ್ಣು ಪರಿವಾರ ದೇವತೆ ಆವಾಹನ ಪೂಜೆ, ಅಗ್ನಿ ಪ್ರತಿಷ್ಠಾಪನೆ, ಗಣಪತಿ ಹೋಮ, ಅಷ್ಟದಿಕ್ಪಾಲಕ ಹೋಮ, ರಾಕ್ಷೆನಥಘ್ನ ಹೋಮ, ಪುರ್ಣಾಹುತಿ, ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.
19ರ ಬೆಳಗ್ಗೆ 6.58ರಿಂದ 8.24ರವರೆಗೆ ಸಲ್ಲುವ ಶುಭ ಕುಂಭ ಲಗ್ನದಲ್ಲಿ ಗೋಪುರ ಕಳಸ ಸ್ಥಾಪನೆ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಕಳಾಹೋಮ, ಪ್ರಧಾನ ದೇವತೆ ಹೋಮ, ಜಯಾದಿ, ಮಹಾ ಪೂರ್ಣಾಹುತಿ, ಅಷ್ಟಾವಧಾನ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ಬಳಿಕ ಬೆಳಗ್ಗೆ 11.30 ರಿಂದ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಚಿತ್ರಹಳ್ಳಿಯ ಹಾಲುಮತಸ್ಥರು, ಗ್ರಾಮಸ್ಥರು ಹಾಗೂ ಭಕ್ತರ ಸಹಕಾರದೊಂದಿಗೆ ನಡೆಯುವ ಈ ಪೂಜಾ ಕಾರ್ಯಕ್ರಮವನ್ನು ಬಾಲೇನಹಳ್ಳಿಯ ಮದನ್ ವಿಶ್ವಕರ್ಮ ತಂಡದವರು ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.