

ಹುಮನಾಬಾದ್: ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ ನಾಗರಕಟ್ಟೆ ಅವರನ್ನು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಸನ್ಮಾನಿಸಿದರು. ರಾಮಮಂದಿರ ನಿರ್ಮಾಣ, ಸಂಘಟನಾ ಕೆಲಸ ಸೇರಿ ವಿವಿಧ ವಿಷಯಗಳ ಕುರಿತು ಗೋಪಾಲ ನಾಗರಕಟ್ಟೆ ಶಾಸಕರಿಗೆ ಮಾರ್ಗದರ್ಶನ ನೀಡಿದರು. ಶಾಸಕ ಶರಣು ಸಲಗರ, ಪ್ರಭಾಕರ ನಾಗರಾಳೆ, ವಿನಾಯಕ ಮಂಡಾ, ನಾಗೇಶ ಕಲ್ಲೂರ, ರವಿ ಮಾಡಗಿ, ನಾಗಭೂಷಣ ಸಂಗಮ, ಅನಿಲ ಪಸರ್ಗಿ ಇತರರಿದ್ದರು.